ಬೆಂಗಳೂರು: ಅಕ್ರಮವಾಗಿ ಕಾರಿನಲ್ಲಿ  ಸಾಗಿಸುತ್ತಿದ್ದ 85 ಲಕ್ಷ ರೂಪಾಯಿ ಹಣವನ್ನು ಮಂಗಳವಾರ ಬೆಳಗ್ಗೆ ಜಪ್ತಿ ಮಾಡಲಾಗಿದೆ.

ಶಿವಮೊಗ್ಗದತ್ತ ಸಾಗುತ್ತಿದ್ದ ಮಹೀಂದ್ರಾ ಎಕ್ಸ್‌ ಯುವಿ ಕಾರನ್ನು ಜಾಸ್‌ ಟೋಲ್‌ ಬಳಿ ತಪಾಸಣೆ ನಡೆಸಿದಾಗ ಅಪಾರ ಪ್ರಮಾಣದ ಹಣ ಪತ್ತೆಯಾಗಿದ್ದು, ಕೂಡಲೇ ಚಾಲಕ ಮತ್ತು ಹಣವನ್ನು ವಶಕ್ಕೆ ಪಡೆಯಲಾಗಿದೆ.

ತೆರಿಗೆ ವಂಚಸಿ ಹಣವನ್ನು ಸಾಗಾಟ ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದ್ದು, ಐಟಿ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.