ಬೆಳಗಾವಿ: ಉತ್ತರ ಕರ್ನಾಟಕ ಭಾಗದ ಜನರ ಆಶೋತ್ತರ ಈಡೇರಿಸುವ ಭಾಗವಾಗಿ ಸೋಮವಾರದಿಂದ ಹತ್ತು ದಿನಗಳ ಕಾಲ ನಡೆಯಲಿರುವ ರಾಜ್ಯ ವಿಧಾನಮಂಡಲದ ಉಭಯ ಸದನಗಳ ಅಧಿವೇಶನ ಪ್ರಾರಂಭವಾಗಿ ಮೂರು ದಿನಗಳಾಗಿದೆ. ಆದರೆ ಯಾವುದೇ ಚರ್ಚೆಗಳು ಸಮರ್ಪಕವಾಗಿ ನಡೆದಿಲ್ಲ.

ಚಳಿಗಾಲದ ಅಧಿವೇಶನದಲ್ಲಿ ಹಲವಾರು ಜ್ವಲಂತ ಸಮಸ್ಯೆಗಳ ಬಗ್ಗೆ  ಚರ್ಚೆ ನಡೆದು ಅದಕ್ಕೊಂದು ಹೋಸ ರೂಪ ಕೊಡುತ್ತಾರೆ ಅಂತ ನಮ್ಮ ಶಾಸಕರುಗಳು ಬೆಳಗಾವಿ ಹೊಗೂತ್ತಾರೆ ಅಂತ ಭಾವಿಸಿದ್ರೆ ಅದು ನಿಮ್ಮ ತಪ್ಪು.

ಏಕೆಂದ್ರೆ ಬೆಳಗಾವಿಗೆ ಹೋಗೊದು ಸಹಿ ಹಾಕೋದು. ಅಲ್ಲೆ ಪಕ್ಕದಲ್ಲಿಯೇ ಸಣ್ಣದೊಂದು ಟೂರ್ ಮಾಡೋದು ಸಾಮಾನ್ಯವಾಗಿ ಬಿಟ್ಟಿದೆ ನಮ್ಮಿಂದ ಆಯ್ಕೆಗೊಂಡ ಈ ಶಾಸಕರುಗಳಿಗೆ.

ಒಂದು ದಿನಕ್ಕೆ 20 ಲಕ್ಷ ರೂಗಳಿಗೂ ಹೆಚ್ಚು  ಖರ್ಚಾಗುತ್ತದೆ. ಈ ಚಳಿಗಾಲದ ಅಧಿವೇಶನಕ್ಕೆ. 10 ದಿನಗಳಕಾಲ ನಡೆಯುವ ಅಧಿವೇಶನದಲ್ಲಿ ಇಂದು ಭಾಗವಹಿಸಿರುವುದು ಕೇವಲ 52 ಮಂದಿ ಶಾಸಕರುಗಳು. ಕಾಂಗ್ರೆಸ್ ನ 26, ಬಿಜೆಪಿ 17, ಜೆಡಿಎಸ್ 9 ಶಾಸಕರುಗಳು ಮಾತ್ರ ಭಾಗವಹಿಸದ್ದಾರೆ.

ಊಟವಾದ ನಂತರ ಬಂದ 52 ಮಂದಿ ಬಹುತೇಕ ಶಾಸಕರುಗಳು ನಿದ್ದೆಗೆ ಜಾರಿದ್ರು. ಯಾವ ಪುರುಷಾರ್ಥಕ್ಕೆ ಈ ಚಳಿಗಾಲದ ಅಧಿವೇಶನ ನಡೆಸಬೇಕು ಎಂಬುದು ಕುಂದಾನಗರಿಯ ಮಂದಿಯ ಪ್ರಶ್ನೆ.