ಬೆಂಗಳೂರು : ಅಖಿಲ ಭಾರತ ಕಿಸಾನ್ ಸಂಘರ್ಷ ಸಮಿತಿಯ ಭಾರತ್ ಬಂದ್ ಹಾಗೂ 28 ರಂದು ಕರ್ನಾಟಕ ಬಂದ್ ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಸೆ. 25 ಮತ್ತು 28 ರಂದು ನಡೆಯಬೇಕಿದ್ದ ಬೆಂಗಳೂರು ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ಮುಂದೂಡಿ ಆದೇಶ ಹೊರಡಿಸಿದೆ.

ಬೆಂಗಳೂರು ವಿವಿಯ ಇಂದು ಮತ್ತು ಸೆ. 28 ರಂದು ನಡೆಯಬೇಕಿದ್ದ, ಅಂತಿಮ ಪದವಿ ಮತ್ತು ಸ್ನಾತಕೋತ್ತರ ಪರೀಕ್ಷೆಗಳು ಮುಂದೂಡಲಾಗಿದ್ದು, ಎರಡು ದಿನಗಳ ಪರೀಕ್ಷೆಗಳನ್ನು ನಡೆಸುವ ಪರಿಷ್ಕೃತ ದಿನಾಂಕವನ್ನು ಸೆ. 28 ರಂದು ಪ್ರಕಟಿಸಲಾಗುತ್ತದೆ ಎಂದು ವಿವಿ ಕುಲಪತಿ ಪ್ರೊ ಕೆ.ಆರ್. ವೇಣುಗೋಪಾಲ್ ತಿಳಿಸಿದ್ದಾರೆ.