ಬೆಂಗಳೂರು: ಸಚಿವರಾದ ವಿ.ಸೋಮಣ್ಣ ಹಾಗೂ ಮಾಧುಸ್ವಾಮಿ ಅವರು ಸಂಪುಟ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಎದುರೇ ಮಾತಿನ ಚಕುಮುಕಿ ನಡೆದಿದೆ.

ಮಾಧುಸ್ವಾಮಿ ಅವರು ಅಕ್ರಮ-ಸಕ್ರಮ ಸಂಬಂಧ ಮಾತನಾಡುವಾಗ ಮೇಲೆದ್ದ ಸೋಮಣ್ಣ, ಬೆಂಗಳೂರಿನ ವಿಚಾರ ಬೆಂಗಳೂರಿಗರಾಗಿ ನಮಗಷ್ಟೇ ಗೊತ್ತು ಎಂದರು. ಇದಕ್ಕೆ ಖಾರವಾಗಿ ಉತ್ತರಿಸಿದ ಮಾಧುಸ್ವಾಮಿ, ಬೆಂಗಳೂರು ನಿಮ್ಮಪ್ಪಂದಾ? ಎಲ್ಲರಿಗೂ ಸೇರಿದ್ದು. ಕಾನೂನಿನಲ್ಲಿ ಇರುವುದನ್ನು ಹೇಳುತ್ತಿದ್ದೇನೆ ಅಷ್ಟೇ ಎಂದರು. ಆಗ ಸಿಎಂ ಮಧ್ಯ ಪ್ರವೇಶಿಸಿ ಜಗಳ ಶಮನಗೊಳಿಸಿದರಂತೆ.!