ಬೆಂಗಳೂರು: ಬೆಂಗಳೂರಿನಲ್ಲಿ ಎಲ್ಲಾ ಕೆಲಸ ಆರಂಭವಾಗಲಿವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಸುದ್ದಿಗೋಷ್ಠಿ ಹೇಳಿದ್ದಾರೆ.

ಬೆಂಗಳೂರಿನ ಬಿಲ್ಡರ್ಸ್ ಜೊತೆಗೆ ಸಭೆ ಕರೆದು ಮಾತನಾಡಿದ್ದೇನೆ. ಕಾರ್ಮಿಕರನ್ನು ಉಳಿಸಿಕೊಂಡು ಅಗತ್ಯ ಸೌಲಭ್ಯಗಳೊಂದಿಗೆ ಕೆಲಸ ಮುಂದುವರಿಸಲು ಒಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರು ವದಂತಿಗೆ ಕಿವಿಗೊಡಬಾರದು. ಇದ್ದಲ್ಲಿಯೇ ಕೆಲಸ ನಿರ್ವಹಿಸಿಕೊಂಡು ಹೋಗುವ ಅವಕಾಶವಿದೆ. ಯಾರೊಬ್ಬರೂ ಭಯಪಡುವುದು ಬೇಡ. ಬೆಂಗಳೂರಿನಲ್ಲಿ ಎಲ್ಲಾ ಕಾಮಗಾರಿಗಳೂ ಆರಂಭವಾಗಲಿವೆ ಎಂದರು.