ಚಿತ್ರದುರ್ಗ: ರಾಜ್ಯದಲ್ಲಿ ಚಿತ್ರದುರ್ಗದ ಮೊಳಕಾಲ್ಮೂರು ಕ್ಷೇತ್ರ ಹಾಗೂ ಬಾದಾಮಿ ಕ್ಷೇತ್ರದ ಬಗ್ಗೆ ಎಲ್ಲರೂ ದೃಷ್ಠಿ. ಏಕೆಂದರೆ ಎರಡು ಕ್ಷೇತ್ರಗಳಲ್ಲಿ ಒಬ್ಬರೇ ಅಭ್ಯರ್ಥಿ ಬಿ. ಶ್ರೀರಾಮುಲು.

ಬಾದಾಮಿ ಕ್ಷೇತ್ರದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ರ ವಿರುದ್ಧ ಶ್ರೀರಾಮುಲು ಪ್ರತಿಸ್ಪರ್ಧಿ. ಹಾಗೆಯೇ ಮೊಳಕಾಲ್ಮೂರು ಕ್ಷೇತ್ರದಲ್ಲಿ ಶ್ರೀರಾಮುಲು ವಿರುದ್ಧ ದೊಡ ಪಡೆಯೇ ಇದೆ.

ಕಾಂಗ್ರೆಸ್ ನಿಂದ ಯೋಗೇಶ್ ಬಾಬು, ಜೆಡಿಎಸ್ ನಿಂದ ಎತ್ನಟ್ಟಿ ಗೌಡ. ಹಾಗೂ ಹಾಲಿ ಶಾಸಕ ತಿಪ್ಪೇಸ್ವಾಮಿ. ಇವರೆಲ್ಲರೂ  ಮ್ಯಾಸ ಬೇಡರ ಸಮುದಾಯಕ್ಕೆ ಸೇರಿದವರು. ಮೊಳಕಾಲ್ಮೂರಿನಲ್ಲಿ ಸುದ್ದಿ ಹಬ್ಬಿರುವುದೇನೆಂದರೆ, ಹೊರಗಿನವರು ಮತ್ತು ನಮ್ಮವರು ಎಂಬ ವಿಚಾರ.

ಎಲ್ಲರಿಗಿಂತಲೂ ಹಾಲಿ ಶಾಸಕ ತಿಪ್ಪೇಸ್ವಾಮಿ ಮಾತ್ರ ಬಿಜೆಪಿ ಟಿಕೆಟ್ ಸಿಗದೆ ಪಕ್ಷೇತ್ರ ಅಭ್ಯರ್ಥಿ ಆಗಿ ಸ್ಪರ್ಧಿಸಿರುವುದರಿಂದ ಶ್ರೀರಾಮುಲು ಅವರಿಗೆ ಮುಳುವಾಗಿದ್ದಾರೆ. ತಿಪ್ಪೇಸ್ವಾಮಿ ಬಗ್ಗೆ ಕ್ಷೇತ್ರದಲ್ಲಿ  ಏನೆ ಆಭಿಪ್ರಾಯವಿದ್ದರೂ ಸಹ ಶ್ರೀರಾಮುಲು ಸೋಲಿಸುವುದೇ ನನ್ನ ಗುರಿ ಎಂದು ಗುಟುರುಹಾಕಿದ್ದಾರೆ. ಶ್ರೀರಾಮುಲು ಸ್ಥಳಿಯರಲ್ಲ ಬೇರೆ ಕ್ಷೇತ್ರದವರು. ಉಳಿದಂತೆ ಕಣದಲ್ಲಿರುವ ಅಭ್ಯರ್ಥಿಗಳು ಸ್ಥಳೀಯರು ಎಂಬ ಸುದ್ದಿ ಹರಿದಾಡುತ್ತಿರುವುದರಿಂದ ಶ್ರೀರಾಮುಲು ಅವರ ಓಟಕ್ಕೆ ತಡೆ ಆಗುವ ಸಾಧ್ಯತೆ ಇದೆ ಎಂಬುದು ಕ್ಷೇತ್ರದ ಮತದಾರರು ಮಾತನಾಡುತ್ತಿದ್ದಾರೆ. ಆದರೆ ಈ ಎಲ್ಲಾ ಗಾಳಿಸುದ್ದಿಗೆ ಬ್ರೇಕ್ ಬೀಳುವುದು ಮತದಾನ ಬಳಿಕವೇ.!