ಚಿತ್ರದುರ್ಗ: ಹೊಸದುರ್ಗದ ಕ್ಷೇತ್ರದಲ್ಲಿ ಬಿ.ಜಿ.ಗೋವಿಂದಪ್ಪ ಎರಡುಬಾರಿ ಶಾಸಕರಾದವರು. ಒಮ್ಮೆ ಗೂಳಿಹಟ್ಟಿ ಶೇಖರ್ ಪಕ್ಷೇತರರಾಗಿ ಚುನಾಯಿತಗೊಂಡವರು. ಈಗ ಗೂಳಿಹಟ್ಟಿ ಶೇಖರ್ ಬಿಜೆಪಿ ಪಕ್ಷದ ಅಭ್ಯರ್ಥಿಆಗಿ ಕಣಕಿಳಿಯಲಿದ್ದಾರಂತೆ ಆದರೆ ಬಿಜೆಪಿ ಪಕ್ಷ ಅಧಿಕೃತವಾಗಿ ಗೂಳಿಹಟ್ಟಿ ಹೆಸರು  ಹೇಳಿಲ್ಲವಾದರೂ ಪಕ್ಷ ಸಂಘಟನೆಯಲ್ಲಿ ಗೂಳಿಹಟ್ಟಿ ತೊಡಗಿಸಿಕೊಂಡಿದ್ದಾರೆ.

ಈ ಹಿಂದೆ ಬಿ.ಜಿ.ಗೋವಿಂದಪ್ಪರ ವಿರುದ್ಧ ಗೂಳಿಹಟ್ಟಿ ಶೇಖರ್ ನಿರಾಯಾಸವಾಗಿ ಗೆಲವು ಸಾಧಿಸಿದ್ದರು. ಆನಂತರ 2012-13 ರ ಚುನಾವಣೆಯಲ್ಲಿ ಇದೇ ಗೂಳಿಹಟ್ಟಿ ಶೇಖರ್ ಗೋವಿಂದಪ್ಪ ರ ಮುಂದೆ ಪರಾಭವ ಗೊಂಡಿದ್ದರು.

ಈಗ ಮತ್ತೆ ಗೂಳಿಹಟ್ಟಿ ಶೇಖರ್ ತನ್ನ ಅಧೃಷ್ಟವನ್ನು ಪರೀಕ್ಷಿಸಲು ಬಿಜೆಪಿ ಪಕ್ಷದಿಂದ ಕಣಕಿಳಿಯಲು ಮುಂದಾಗಿದ್ದಾರೆ.

ಗೂಳಿಹಟ್ಟಿ ಶೇಖರ್ ಒಡ್ಡುವ ತಡೆಗೋಡೆಯನ್ನು ಗೋವಿಂದಪ್ಪರು ಬೇಧಿಸಿ ಹೊಸದುರ್ಗದ ರಾಜಕೀಯ ಇತಿಹಾಸದಲ್ಲಿ ಒಮ್ಮೆ ಚುನಾಯಿತರಾದವರನ್ನು ಮತ್ತೆ ಗೆಲ್ಲಿಸಿದ ಉದಾಹರಣೆಗಳಿಲ್ಲ ಆದ್ರೆ ಬಿ.ಜಿ.ಗೋವಿಂದಪ್ಪರು ಒಮ್ಮೆ ಗೆದ್ದನಂತರ ಮತ್ತೆ ಸೋಲುಂಡು ಆನಂತರ ಆಯ್ಕೆ ಆದವರು.

ಈಗ ಬಿ.ಜಿ.ಗೋವಿಂದಪ್ಪರನ್ನು ಮತ್ತೆ ಮತದಾರ ಕೈ ಹಿಡಿಯುತ್ತಾನ ಎಂಬುದು ಪ್ರಶ್ನೆ ಅದಕ್ಕೆ ಉತ್ತರ.?