ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಬಿಜೆಪಿ ಹೈಕಮಾಂಡ್ ಗೆ ಆರ್ ಎಸ್‌ಎಸ್ ಮುಖಂಡರೊಬ್ಬರು ದೂರು ಸಲ್ಲಿಸಿದ್ದಾರಂತೆ.!

ಆರ್ ಎಸ್‌ಎಸ್ ನ ಕೆಲ ಮುಖಂಡರ ನಡುವೆ ಬಿಎಸ್ ವೈ ನಡುವೆ ಭಿನ್ನಮತ ಜೋರಾಗಿದೆ. ಏಕೆಂದರೆ ಯಡಿಯೂರಪ್ಪ ಏಕಪಕ್ಷೀಯ ನಡೆ ಅನುಸರಿಸುತ್ತಿದ್ದಾರಂತೆ ಎಂಬ ಮಾಹಿತಿ ಬಿಜೆಪಿ ಆಪ್ತ ಮೂಲಗಳಿಂದ ತಿಳಿದುಬಂದಿದೆ.

ಕಾರಣ ವಿಧಾನಪರಿಷತ್ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಬಿಎಸ್ ವೈ ಏಕಪಕ್ಷೀಯ ನಡೆ ಅನುಸರಿಸುತ್ತಿದ್ದಾರೆ. ಆರ್ ಎಸ್‌ಎಸ್ ನಾಯಕರ ಸಲಹೆಗಳನ್ನು ಬಿಎಸ್ ವೈ ಪರಿಗಣಿಸಿಲ್ಲ. ನಿನ್ನೆ ಮೊನ್ನೆ ಬಂದ ಕೆ.ಪಿ. ನಂಜುಂಡಿಗೆ ಪಕ್ಷದಲ್ಲಿ ಜವಾಬ್ದಾರಿ ಕೊಡಬಹುದಿತ್ತು. ಆದರೆ ಪರಿಷತ್ ಸ್ಥಾನ ಕೊಟ್ಟಿದ್ದಾರೆ. ಅಲ್ಲದೇ ಬ್ರಾಹ್ಮಣ ಸಮುದಾಯವನ್ನು ಬಿಎಸ್ ವೈ ಪರಿಗಣಿಸಿಲ್ಲ ಎಂದು ಮುಕುಂದ್ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಲಾಲ್ ಗೆ ದೂರು ನೀಡಿದ್ದಾರೆ ಎಂಬ ಸುದ್ದಿ ಬಿಜೆಪಿ ವಲಯದಲ್ಲಿ ಹರಿದಾಡುತ್ತಿದೆ.