ದಾವಣಗರೆ : ದಾವಣಗರೆ ಆಲ್ಲದೆ ರಾಜ್ಯದ ಪ್ರಸಿದ್ದ ಜವಳಿ ಅಂಗಡಿ ಬಿ.ಎಸ್. ಚನ್ನಬಸಪ್ಪ ಅಂಡ್ ಸನ್ಸ್ ಅಂಗಡಿ ಹಾಗೂ ಎರಡು ಮನೆಗಳ ಮೇಲೆ ಏಕಕಾಲಕ್ಕೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆಂದು ತಿಳಿದು ಬಂದಿದೆ.

ದಾವಣಗೆರೆ ಹಳೆ ನಗರದಲ್ಲಿರುವ ಮೂರು ಅಂಗಡಿ ಹಾಗೂ ಡೆಂಟಲ್ ಕಾಲೇಜ್ ರಸ್ತೆಯಲ್ಲಿರುವ ಅಂಗಡಿ ಮತ್ತು ಎವಿಕೆ ಕಾಲೇಜು ರಸ್ತೆಯಲ್ಲಿರುವ ಎರಡು ಅಂಗಡಿ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ

ಬಳಿಕ ಸಮರ್ಪಕ ತೆರಿಗೆ ಪಾವತಿಸಿದ ಬಗ್ಗೆ ದಾಖಲೆ ನೀಡುವಂತೆ ಮಾಲೀಕರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಶೋಧ ಕಾರ್ಯ ಮುಂದುವರಿಸಿದ್ದಾರೆ ಎಂದು ತಿಳಿದು ಬಂದಿದೆ.