ಬೆಂಗಳೂರು: ನಿನ್ನೆ ಕೊಡಗು ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ಬಿಸ್ಕೆಟ್ ಎಸೆದಿದ್ದಾರೆ ಎಂಬ ಸುದ್ದಿ ಗೆ ಸ್ಪಷ್ಟನೆ ನೀಡಿದ ಹೆಚ್.ಡಿ.ರೇವಣ್ಣ ಅವರು ಎಸೆದಿಲ್ಲ ನಾನು ದೇವರನ್ನು ನಂಬುವವನು.ನಾನು ಬೇಕು ಅಂತಾ ಎಸೆದಿಲ್ಲ. ಹಿಂದೆ ಕುಳಿತಿದ್ದವರೂ ಜೋರಾಗಿ ಕೂಗುತ್ತಿದ್ದವರು.ಅವರಿಗೂ ಸಿಗಲಿ ಅಂತಾ ಒಳ್ಳೆಯ ಮನಸ್ಸಿನಿಂನ ಎಸೆದಿದ್ದೇನೆ, ಅಂತಹ ಮನೋಭಾವನೆ ನನ್ನದಲ್ಲ

ಹಗಲು, ರಾತ್ರಿ ಎನ್ನದೆ ಕೆಲಸ ಮಾಡುತ್ತಿದ್ದೇನೆ. 3 ಸಾವಿರ ಹಾಲಿನ ಪ್ಯಾಕೇಟ್‌ ವಿತರಿಸಿದ್ದೇನೆ. ಎಸೆದಿದ್ದೇನಾ’ ಎಂದು ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ ನನ್ನಿಂದ ತಪ್ಪಾಗಿದೆ ಬಿಡಿ..ಜನ ಕೇಳಿದ್ರೆ ಕ್ಷಮೆ ಕೇಳುತ್ತೇನೆ ಎಂದು ಹೇಳಿದರು.