ಆತ್ಮೀಯರೇ,
ಇಂದಿಗೆ ಬಿಸಿ ಸುದ್ದಿ ಪ್ರಾರಂಭವಾಗಿ ಮೂರು ವಸಂತಗಳನ್ನು ಪೂರೈಸಿ ನಾಲ್ಕನೇ ವಸಂತಕ್ಕೆ ಪಾದಾರ್ಪಣೆ ಮಾಡುವ ಈ ಸಂದರ್ಭದಲ್ಲಿ ನಮ್ಮೇಲ್ಲಾ ಓದುಗರಿಗೂ, ಜಾಹೀರಾತುದಾರರಿಗೂ ನಲ್ಮೆಯ ನಮಸ್ಕಾರಗಳು.

ಮೂರು ವರ್ಷಗಳ ಹಿಂದೆ ಬಿಸಿ ಸುದ್ದಿ ಯನ್ನು ಅಳುಕಿನಿಂದಲೇ ಪ್ರಾರಂಭಮಾಡಿದೆ. ಓದುಗರು ಯಾವರೀತಿಯಾಗಿ ಸ್ಪಂದಿಸುತ್ತಾರೆ ಎಂಬುದು ತಿಳಿಯದಾಗಿತ್ತು. ನಾವೆಲ್ಲಾ ಪತ್ರಿಕೆಯನ್ನು ಪ್ರಿಂಟ್ ಹಾಕಿ ಎಷ್ಟು ಪ್ರಸಾರವಾಗುತ್ತೆ ಎಂಬುದು ಲೆಕ್ಕದಿಂದ ತಿಳಿಯುತಿತ್ತು. ಆದರೆ ಇದು ವೆಬ್ ಪತ್ರಿಕೆ ಹಾಗಾಗಿ ಅಳಕು.

ಪ್ರಾರಂಭಕ್ಕೆ ನನ್ನ ಬೆಂಬಲಕ್ಕೆ ನಿಂತವರು ದುರ್ಗದ ಪತ್ರಿಕಾ ಹಾಗೂ ಟಿವಿ ಮಾಧ್ಯಮದ ಗೆಳೆಯರು.
ಹಾಗೆ ನೋಡಿದರೆ ಈ ಮೂರು ವರ್ಷದಲ್ಲಿ ಬಿಸಿ ಸುದ್ದಿ ಸತ್ಯ ಸುದ್ದಿಗಳನ್ನು ನೀಡುವಲ್ಲಿ ಮುಂದಾಗಿದೆ. ಸಾಹಿತ್ಯ, ಕೃಷಿ ಹಲವಾರು ಕಾಲಂಗಳನ್ನು ಮೆಚ್ಚಿ ಮೇಲ್ ಮಾಡಿದ್ದಾರೆ.

ಡೈಲಿಹಂಟ್ ಇನ್ನಿತರ ಕಂಪನಿಗಳಲ್ಲಿ ಬಿಸಿ ಸುದ್ದಿ ಟ್ರೈಪ್ ಆಗಿದೆ ಎಂಬದು ಸಂತೋಷದ ಸುದ್ದಿ, ಒಂದು ಸುದ್ದಿ ಲಕ್ಷಾಂತರ ಓದುಗರಿಗೆ ತಲುಪಲು ಈ ಕಂಪನಿಗಳು ಸಹಕಾರಿಯಾಗವೆ ಎಂದು ಹೇಳಲು ಹೆಮ್ಮೆ ಅನಿಸುತ್ತಿದೆ.
ಎನಿ ಹೌ ಗೆಳೆಯರೇ ನಿಮ್ಮೆಲ್ಲರ ಸಹಕಾರದಿಂದ ಬಿಸಿ ಸುದ್ದಿ ಈಗ ನಾಲ್ಕನೇ ವಸಂತಕ್ಕೆ ಕಾಲಿಡುತ್ತಿದೆ. ಹೀಗೆ ನಿಮ್ಮೆಲ್ಲರ ಸಹಕಾರ ಹೀಗೆ ಮುಂದುವರೆಯಲಿ ಎಂಬ ಸದಾಶಯದೊಂದಿಗೆ.
ಇಂತಿ,
ಚಳ್ಳಕೆರೆ ಬಸವರಾಜ
ಸಂಪಾದಕ