ತುಮಕೂರು: ಮಧ್ಯಾಹ್ನ ಬಿಸಿ ಊಟ ಸೇವಿಸಿದ ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ತುರುವೆಕೆರೆಯ ತೂಯಾರೆಹಳ್ಳಿ ಯಲ್ಲಿ ನಡೆದಿದೆ.

ಮಧ್ಯಾಹ್ನ ಅನ್ನ ಸಾಂಬರ್ ತಿಂದ ಸುಮಾರು 80 ಮಕ್ಕಳಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು ತಕ್ಷಣ ಆಸ್ಪತ್ರೆಗೆ ಸೇರಿಸಲಾಗಿದೆ  1 ರಿಂದ 7 ನೇ ತರಗತಿಯ ವರೆಗೆ ಓದುತ್ತಿರುವ ಮಕ್ಕಳು ಎಂದು ತಿಳಿದುಬಂದಿದೆ.

ತುರುವೆಕೆರೆಯ ಆಸ್ಪತ್ರೆಗೆ ಎಲ್ಲಾ ಮಕ್ಕಳನ್ನು ಸೇರಿಸಲಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆಂದು ತಿಳಿದುಬಂದಿದೆ.

( ಸಾಂದರ್ಭಿಕ ಚಿತ್ರ)