ಬೆಳಗಾವಿ: ಬಿಸಿ ಊಟ ಸೇವಿಸಿ 60ಕ್ಕೂ ಅಧಿಕ ಮಕ್ಕಳು ಅಸ್ವಸ್ಥರಾಗಿರುವ ಘಟನೆ.ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಲಕನಾಯನಕೊಪ್ಪ ಗ್ರಾಮದ ಸರ್ಕಾರಿ‌ ಶಾಲೆಯಲ್ಲಿ ನಡೆದಿದೆ.

ಮಧ್ಯಾಹ್ನ ಊಟ ಸೇವಿಸಿದ ಬಳಿಕ ಶಾಲೆಯ 60ಕ್ಕೂ ಅಧಿಕ ಮಕ್ಕಳಿಗೆ ಫುಡ್ ಪಾಯಿಸನಿಂಗ್ ಆಗಿದೆ. ಹೊಟ್ಟೆ ‌ನೋವು‌ ಹೆಚ್ಚಾಗುತ್ತಿದ್ದಂತೆ ಮಕ್ಕಳು ಕಿರುಚಾಡತೊಡಗಿ, ವಾಂತಿ ಭೇದಿಯಿಂದ ಬಳಲಿದ್ದಾರೆ. ಅಸ್ವಸ್ಥ ಮಕ್ಕಳನ್ನು ಖಾಸಗಿ ವಾಹನದ ಮೂಲಕ ಕರೆತಂದು ರಾಮದುರ್ಗ ತಾಲೂಕು ಆಸ್ಪತ್ರೆಗೆ ದಾಖಲಿಸಿ‌ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.