ಬೆಂಗಳೂರು : ಭಯಂಕರ ಬೇಸಿಗೆ ಕಾಲದಲ್ಲಿ ಬಹುತೇಕ ಮಂದಿ ಬಿಯರ್ ಗೆ ಮಾರುಹೋಗುತ್ತಾರೆ. ಆದ್ರೆ ಮುಂದಿನ ತಿಂಗಳಿಂದ ಬಿಯರ್ ರೇಟ್ ಜಾಸ್ತಿ ಆಗಲಿದೆ.!

ಹಾಲಿ ಇರುವ ಎಂ.ಆರ್.ಪಿ ದರಕ್ಕೆ ತೆರಿಗೆ ಸೇರಿಸಿ ದರವನ್ನು ಪರಿಷ್ಕರಿಸಲಾಗಿದೆ. ಪ್ರೀಮಿಯಂ ಬಿಯರ್ ಬೆಲೆ ಹಾಲಿ 110 ರೂ. ಇದ್ದದ್ದು, 125 ರೂ. ಆಗಲಿದೆ. ಅದೇ ರೀತಿ 500 ಎಂ.ಎಲ್. ನ ಸ್ರಾಂಗ್ ಬಿಯರ್ ಬೆಲೆ 120 ರೂ. ಇದ್ದದ್ದು, 135 ರೂ. 650 ಎಂ.ಎಲ್. ನ ಬಾಟಲ್ ಬೆಲೆ 150 ರೂ. ನಿಂದ 170 ರೂ.ಗೆ ಏರಿಕೆಯಾಗಲಿದೆ. ಅಬಕಾರಿ ಇಲಾಖೆ ಈಗಾಗಲೇ ಬಹುತೇಕ ಅಂತಿಮಗೊಳಿಸಲಾಗಿದೆ ಎನ್ನಲಾಗಿದೆ.

ಬಿಯರ್ ದರ ಏರಿಕೆಯನ್ನು 2019-20 ನೇ ಸಾಲಿನ ಬಜೆಟ್ ನಲ್ಲೇ ಘೋಷಿಸಿದ್ದರಿಂದ ಇದಕ್ಕೆ ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ. ನಿಗದಿಯಂತೆ ಏ. 1 ರಿಂದ ಬಿಯರ್ ಮೇಲಿನ ತೆರಿಗೆ ಏರಿಕೆ ಜಾರಿಯಾಗುವುದರಿಂದ ಬಿಯರ್ ಬೆಲೆಯೂ ಹೆಚ್ಚಾಗಲಿದೆ ಎಂದು ಅಬಕಾರಿ ಉದ್ಯಮದ ತಜ್ಞರು ಹೇಳುತ್ತಾರೆ.!