ಮಂಡ್ಯ: ಬಿಜೆಪಿ ಸದಸ್ಯರ ಕೋರ್ ಕಮಿಟಿ ಸಭೆಗೆ ಹಾಜರಾದ ಬಗ್ಗೆ ಸಂಸದೆ ಸುಮಲತಾ ಅಂಬರೀಷ್ ಸ್ಪಷ್ಟನೆ ನೀಡಿದ್ದಾರೆ.

ಬಿಜೆಪಿ ಸೇರುವುದಾದರೆ ಎಲ್ಲರಿಗೂ ಹೇಳಿ ಸೇರ್ಪಡೆಯಾಗುತ್ತೇನೆ. ಈ ಹಿಂದೆ ನಾಲ್ಕೈದು ಬಾರಿ ಬಿಜೆಪಿ ಸಭೆಗೆ ಬರಬೇಕಾಗಿತ್ತು. ಚುನಾವಣೆಯಲ್ಲಿ ನನ್ನ ಪರವಾಗಿ ಬಿಜೆಪಿ ಜನ, ಕಾರ್ಯಕರ್ತರು ಕೆಲಸ ಮಾಡಿದ್ದರು. ಅವರಿಗೆಲ್ಲ ಧನ್ಯವಾದ ಹೇಳಬೇಕಾಗಿತ್ತು. ಹಾಗಾಗಿ ಇಂದು ಬಿಜೆಪಿ ಸಭೆಗೆ ಬಂದಿದ್ದೇನೆ ಎಂದು ಹೇಳಿದ ಅವರು, ಬಿಜೆಪಿ ಸೇರ್ಪಡೆ ವಿಚಾರಕ್ಕೆ ತೆಲೆ ಅಲ್ಲಾಡಿಸಿದ್ದಾರೆ.!