ಬೆಂಗಳೂರು: ಕುಮಾರಣ್ಣನ ಚೊಚ್ಚಲ ಬಜೆಟ್ ನಲ್ಲಿ ಬಿಪಿಎಲ್ ಕಾರ್ಡ್ ದಾರರಿಗೆ ಪಡಿತರ ಚೀಟಿಯಲ್ಲಿ ಸಿಗುವ ಆಹಾರ ಎಷ್ಟಪ್ಪ  ಅಂದ್ರೆ  ಅನ್ನಭಾಗ್ಯ ಅಕ್ಕಿ ವಿತರಣೆ ಯಲ್ಲಿ 7 ರಿಂದ 5 ಕೆಜಿಗೆ ಇಳಿಕೆ, ತೊಗರಿಬೇಳೆಗೂ ಕತ್ತರಿ ಮಾಡಿ ರಿಯಾಯಿತಿ ದರದಲ್ಲಿ ಅರ್ಧ ಕೆಜಿ ತೊಗರಿಬೇಳೆ, 1 ಕೆಜಿ ಪಾಮ್ ಎಣ್ಣೆ, 1 ಕೆಜಿ ಉಪ್ಪು, 1 ಕೆಜಿ ಸಕ್ಕರೆ, ವರ್ಷಕ್ಕೊಮ್ಮೆ ಪಡಿತರ ಚೀಟಿ ಪರಿಶೀಲಿಸಿ ಅರ್ಹರಿಗೆ ಮಾತ್ರ ವಿತರಣೆ ಆಗಲಿದೆ.

ಬಿಪಿಎಲ್ ಕುಟುಂಬದ ಗರ್ಭಿಣಿಯರಿಗೆ ಹೆರಿಗೆ ಪೂರ್ವ ಮೂರು ತಿಂಗಳು, ಹೆರಿಗೆ ನಂತರದ ಮೂರು ತಿಂಗಳು ಮಾಸಿಕ 1000 ರೂ, ಅಧಾರ್ ಲಿಂಕ್ ಇರುವ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ, ನವಂಬರ್ 1ರಿಂದ ಜಾರಿಮಾಡಲಾಗುವುದು ಎಂದು ಬಜೆಟ್ ಭಾಷಣದಲ್ಲಿ ಮುಖ್ಯ ಮಂತ್ರಿ ಕುಮಾರಣ್ಣ ಹೇಳಿದ್ದಾರೆ.