ಬೆಂಗಳೂರು: ಮುಖ್ಯ ಮಂತ್ರಿ ಕುಮಾರಸ್ವಾಮಿಯವರು ಬಜೆಟ್ ಮಂಡನೆ ಮಾಡುವಾಗ ರೈತರ ಸಾಲ ಮನ್ನಾ ಕ್ಕೆ ಸರಿತೂಗಿಸಲು ಬಿಪಿಎಲ್ ಕಾರ್ಡ್ ದಾರರಿಗೆ 7 ಕೆಜಿ ಅಕ್ಕಿಯನ್ನು 5 ಕೆಜಿಗೆ ಇಳಿಸಿದ್ದರು. ಆಗ ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದರು.

ಸ್ವತಃ ಸಿದ್ದರಾಮಯ್ಯರು ಯಾವುದೇ ಕಾರಣಕ್ಕೂ ಅಕ್ಕಿಯನ್ನು ಕಡಿತ ಮಾಡಬೇಡಿ ಅಂತ ಮುಖ್ಯ ಮಂತ್ರಿ ಕುಮಾರಸ್ವಾಮಿಗೆ ಪತ್ರ ಬರೆದಿದ್ದರು. ಆಗ ಕುಮಾರಸ್ವಾಮಿಯರು ಅಕ್ಕಿ ಕಡಿತ ಮಾಡುವುದಿಲ್ಲ ಅಂತ ಹೇಳದ್ದರು. ಆದ್ರೆ ಈಗ ಮತ್ತೆ ಅಕ್ಕಿಯನ್ನು ಕಡಿತ ಮಾಡಿ 7 ಕೆಜಿ ಬದಲು 5 ಕೆಜಿ ಅಕ್ಕಿ ನೀಡಲಾಗುತ್ತದೆಯಂತೆ ಎಂಬ ಸುದ್ದಿ ಹರಿದಾಡುತ್ತಿದೆ. ಅಂದ್ರೆ ಈ ತಿಂಗಳ ಇಂಡೆಂಟ್ ಪ್ರಕಾರ 7 ಕೆಜಿ ಸಿಗುತ್ತೆ ಮುಂದಿನ ತಿಂಗಳು ಇಂಡೆಂಟ್ ಹಾಕಿದಾಗ ತಿಳಿಯುತ್ತದೆ ಎಂಬುದನ್ನು ನ್ಯಾಯ ಬೆಲೆ ಅಂಗಡಿಯವರು ಹೇಳುತ್ತಾರೆ.

7 ಕೆಜಿ ಬದಲು 5 ಕೆಜಿ ಅಕ್ಕಿ ನೀಡಿದ್ರೆ ಸರಕಾರಕ್ಕೆ 4500 ಕೋಟಿ ಉಳಿಯುತ್ತದೆ ಎಂಬುದು ಲೆಕ್ಕಾಚಾರವಂತೆ.!