ಬೆಂಗಳೂರು: ಬಿಪಿಎಲ್ ಕಾರ್ಡ್‌ದಾರರು ಇನ್ನು ಮುಂದೆ ಆಸ್ಪತ್ರೆಗಳ ಒಪಿಡಿಯಲ್ಲಿ ಉಚಿತ ಚಿಕಿತ್ಸೆ ಪಡೆಯಬಹುದಾಗಿದೆ. ಬಿಪಿಎಲ್‌ ಕಾರ್ಡ್‌ ಹೊಂದಿರುವವರು, ರಾಜ್ಯ ವೈದ್ಯಕೀಯ ಶಿಕ್ಷಣ ಇಲಾಖೆ ಅಡಿಯಲ್ಲಿ ಬರುವ ವೈದ್ಯಕೀಯ ಕಾಲೇಜು ಆಸ್ಪತ್ರೆಗಳ ಒಪಿಡಿ ವಿಭಾಗದಲ್ಲಿ ತಪಾಸಣೆ ಮತ್ತು ಚಿಕಿತ್ಸೆಯನ್ನು ಪಡೆಯಬಹುದಾಗಿದೆ.

ಒಪಿಡಿ ಚಿಕಿತ್ಸೆ, ಸ್ಕ್ಯಾನಿಂಗ್, ಎಕ್ಸ್‌ ರೇ ಮಾಡಿಸಿದಲ್ಲಿ ಬಿಪಿಎಲ್ ಕಾರ್ಡ್ ದಾರರಿಗೆ ಶೇ 50 ಶುಲ್ಕ ವಿಧಿಸಲಾಗುತ್ತಿತ್ತು, ಆದರೆ ಇನ್ನು ಮುಂದೆ ಈ ಶುಲ್ಕ ಸಹ ಇರುವುದಿಲ್ಲ. ವೈದ್ಯಕೀಯ ಶಿಕ್ಷಣ ಸಚಿವ ಡಾ. ಸಿ. ಎನ್‌.ಅಶ್ವತ್ಥನಾರಾಯಣ ಅವರು ಈ ಸೂಚನೆ ಹೊರಡಿಸಿದ್ದು, ಅದರಂತೆ ಇಲಾಖೆಯ ಅಧಿಕಾರಿಗಳು ಬಿಪಿಎಲ್‌ ಕಾರ್ಡ್‌ ದಾರಿಗೆ ಉಚಿತ ಚಿಕಿತ್ಸೆ ನೀಡುವ ಕುರಿತು ಹೊಸದಾಗಿ ಸುತ್ತೋಲೆ ಹೊರಡಿಸಿಲಾಗಿದೆ.

ಒಪಿಡಿ ಬಿಟ್ಟು ಆಸ್ಪತ್ರೆಗೆ ಒಳರೋಗಿಯಾಗಿ ಸೇರುವ ಬಿಪಿಎಲ್ ಕಾರ್ಡ್‌ ದಾರರಿಗೆ ಆಯುಷ್ಮಾನ್‌ ಯೋಜನೆ ಅಡಿ 94% ವೈದ್ಯಕೀಯ ವೆಚ್ಚ ಮನ್ನಾ ಆಗುತ್ತದೆ. ಇವರಿಗೆ ಬಿಪಿಎಲ್ ಜೊತೆಗೆ ಆಧಾರ್ ಕಡ್ಡಾಯವಾಗಿರುತ್ತದೆ. ಸುದ್ದಿ ಅಂದ್ರೆ ಸಿಹಿ ಅಲ್ವೆ.!