ಬೀದರ್: ಕೂಲಿ ಕಾರ್ಮಿಕರು ರಜೆ ಹಾಕಿ ಪಡಿತರ ಪಡೆಯದೇ, ಕೂಲಿ ಕೆಲಸ ಮಾಡಿದ ಬಳಿಕವೂ ರಾತ್ರಿ ವೇಳೆಯಲ್ಲಿಯೇ ಪಡಿತರ ಪಡೆಯಲಿ ಎಂಬ ಕಾರಣದಿಂದ ನ್ಯಾಯಬೆಲೆ ಅಂಗಡಿಗಳಿಗೆ ರಾತ್ರಿ 8 ಗಂಟೆವರೆಗೆ ಪಡಿತರ ವಿತರಿಸಲು ಸೂಚನೆ ನೀಡಿದ್ದೇನೆ. ಎಂದು ರಾಜ್ಯದ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಕೆ.ಗೋಪಾಲಯ್ಯ ಹೇಳಿದ್ದಾರೆ.

ಅವರು ಬೀದರ್ ನಲ್ಲಿ ಮಾತನಾಡಿ ಇದರಿಂದ ಕೂಲಿ ಕಾರ್ಮಿಕರು ಕೂಲಿ ಹಣ ಗಳಿಸುವ ಜೊತೆಗೆ ಸರ್ಕಾರದ ಸೌಲಭ್ಯದಿಂದಲೂ ವಂಚಿತರಾಗುವುದಿಲ್ಲ ಎಂದರು.