ಗದಗ: ಸರ್ಕಾರದ ಆಯುಷ್ಯದ ಬಗ್ಗೆ ಸಚಿವ ಬಿ.ಶ್ರೀರಾಮುಲು ನೀಡಿರುವ ಹೇಳಿಕೆಯೊಂದು ಸದ್ಯ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಮೂರು ತಿಂಗಳಲ್ಲಿ ಸರ್ಕಾರದ ಅಷ್ಟೂ ಅನುದಾನವನ್ನು ಬಳಸಿ.

ಏಕೆಂದರೆ ನಾಳೆ ಏನಾದರೂ ಆದರೆ ನಾನು ಆರೋಗ್ಯ ಮಂತ್ರಿಯಾಗಿರಲ್ಲ ಎಂದು ಗದಗದಲ್ಲಿ ಹೇಳಿದ್ದಾರೆ. ಸರ್ಕಾರದ ಆಯಸ್ಸು ಕೇವಲ ಮೂರು ತಿಂಗಳೇನಾ. ಅಥವಾ ಶ್ರೀರಾಮುಲು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರಾ ಎಂಬಂತಹ ಮಾತುಗಳು ರಾಜಕೀಯ ವಲಯದಲ್ಲಿ ಚರ್ಚೆಗೆಗೊಳ ಪಟ್ಟಿದೆ.!