ಕೊಪ್ಪಳ: ಹೌದು ಈ ಮಾತನ್ನು ಹೇಳಿದ್ದು ಬೇರ್ಯಾರು ಅಲ್ಲ. ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ.

ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪಕ್ಷಾಂತರ ಮಾಡಿರುವ ಶಾಸಕರು ಈವರೆಗೆ ನನ್ನನ್ನು ಭೇಟಿ ಮಾಡಿಲ್ಲ. ಆದರೆ, ಅಸಮಾಧಾನಿತ  ಬಿಜೆಪಿಯ ಕೆಲ ಶಾಸಕರು ಭೇಟಿ ಮಾಡಿದ್ದಾರೆ.

ಅವರೇ ಹೇಳುವ ಪ್ರಕಾರ ಬಿಜೆಪಿ ಸರ್ಕಾರದಲ್ಲಿ ಏನೂ ಸರಿಯಿಲ್ಲ. ಸಂವಿಧಾನಾತ್ಮಕ ಸಿಎಂ ಆಗಿ ಬಿಎಸ್ ವೈ ಮತ್ತು ಅಸಂವಿಧಾನಾತ್ಮಕವಾಗಿ ಅವರ ಪುತ್ರ ವಿಜಯೇಂದ್ರ ಅಧಿಕಾರ ಮಾಡುತ್ತಿದ್ದಾರೆ’ ಎಂದು ಹೇಳಿದ್ದಾರೆ.