ಬೀದರ್: ಜಿಎಸ್‌ಟಿ ಹಣ ನಮ್ಮ ಹಕ್ಕು ತೆರಿಗೆ ಪಾವತಿಯಲ್ಲಿ ಕರ್ನಾಟಕ ದೇಶದಲ್ಲೇ 3ನೇ ಸ್ಥಾನದಲ್ಲಿದೆ., ಭಿಕ್ಷೆ ಅಲ್ಲ. ಆದರೆ, ಹಣ ಕೊಡಲು ಕೇಂದ್ರ ಮಲತಾಯಿ ಧೋರಣೆ ತೋರುತ್ತಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಈಶ್ವರ ಖಂಡ್ರೆ ಆರೋಪಿಸಿದ್ದಾರೆ.

ಮುಂದು ವರೆದು ಮಾತನಾಡುತ್ತಾ, ನೆರೆ ಪರಿಹಾರ, ಅನುದಾನ ಹಂಚಿಕೆ ಸೇರಿದಂತೆ ಪ್ರತಿ ಹಂತದಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ತಾರತಮ್ಯ ಎಸಗುತ್ತಿದೆ. ಆದರೂ ಪ್ರಧಾನ ಮಂತ್ರಿಗಳನ್ನು ಕೇಳಲು ಧೈರ್ಯ ತೋರದ ರಾಜ್ಯದ ಬಿಜೆಪಿ ಸಂಸದರು ಪುಕ್ಕಲರು ಅಂತ ಹೇಳಿದ್ದಾರೆ.