ಬೆಂಗಳೂರು: ರಾಜಾಜಿನಗರ ಕ್ಷೇತ್ರ ಶಾಸಕ ಹಾಗೂ ಅಭ್ಯರ್ಥಿ ಸುರೇಶ್ ಕುಮಾರ್ ವಿರುದ್ಧ ಆದಾಯಕ್ಕಿಂತ ಅಧಿಕ‌ ಆಸ್ತಿ ಗಳಿಕೆ ಆರೋಪದ ಸಂಬಂಧ ಎಸಿಬಿಯಲ್ಲಿ ದೂರನ್ನು ವಕೀಲ ಸೂರ್ಯ ಮುಕುಂದರಾಜ್ ಅವರು ದಾಖಲಿಸಿದ್ದಾರೆ.

2011-2012 ರಲ್ಲಿ ಲೋಕಾಯುಕ್ತಕ್ಕೆ ಸಲ್ಲಿಸಿರುವ ಆಸ್ತಿ ವಿವರಣೆಯಲ್ಲಿ ಭಾರಿ ಅಕ್ರಮವೆಸಗಲಾಗಿದೆ. ಕುಟುಂಬದ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಘೋಷಣೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ನಾರಾಯಣ ಮತ್ತು ನಾಗರಾಜ್ ಎಂಬುವವರಿಂದ ಸಾಲ ಪಡೆದಿದ್ದಾಗಿ ತೋರಿಸಿ ಆಸ್ತಿ ಖರೀದಿ ಮಾಡಿದ್ದಾರೆ. ಖರೀದಿ ಮಾಡಿದ ಆಸ್ತಿಯ ಮೌಲ್ಯವನ್ನು ಮಾರುಕಟ್ಟೆ ಮೌಲ್ಯಕ್ಕಿಂತ ಕಡಿಮೆ ತೋರಿಸಿ ಆದಾಯ ತೆರಿಗೆ ವಂಚಿಸಿದ್ದಾರೆ ಹಾಗಾಗಿ  ನೈಜ ಬೆಲೆ ಮರೆಮಾಚಿ ಸುರೇಶ್‌ ಕುಮಾರ್ ಆಸ್ತಿ ಖರೀದಿ ಮಾಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ.