ಹಾಸನ: ಸಮಿಶ್ರ ಸರಕಾರವನ್ನು ಬೀಳಿಸಲು  ಮುಂದಾಗಿರುವ ಬಿಜೆಪಿ ವಿರುದ್ಧ ದಂಗೆ ಏಳುವಂತೆ ಕುಮಾರಸ್ವಾಮಿ ಜನತೆಗೆ ಕರೆ ನೀಡಿದ್ದಾರೆ.

ಹಾಸನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಹೆಚ್ಡಿಕೆ ಈ ಪುಣ್ಯ ಭೂಮಿಯಿಂದ ನಾನು ನಾಡಿನ ಜನತೆಗೆ ಕರೆ ನೀಡುತ್ತಿದ್ದೇನೆ. ರಾಜ್ಯದ ಜನತೆಗೆ ಒಳ್ಳೆ ಆಡಳಿತ ನೀಡುವ ಉದ್ದೇಶದಿಂದ ನಾನು ಇರುವೆ, ಒಂದು ವೇಳೆ ನಾನು ಕೂಡ ತಪ್ಪು ಮಾಡಿದರೆ ನನ್ನ ವಿರುದ್ದ ಕೂಡ ಜನ ದಂಗೆ ಏಳಿ ಅಂತ ಹೇಳಿದರು.