ಬೆಂಗಳೂರು: ಇಂದು ಬಿಜೆಪಿ ಕಚೇರಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪನವರು ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದರು. ಇದೇ ವೇಳೆ ಬಿಡುಗಡೆಯಾದ ಪ್ರಣಾಳಿಕೆಯಲ್ಲಿ ರೈತರ ಸಾಲ ಮನ್ನಾ, ಬಡಮಹಿಳೆಯರಿಗೆ ಸ್ಮಾರ್ಟ್​ಫೋನ್ ಕೊಡುವುದು ಸೇರಿದಂತೆ ಬಿಜೆಪಿ ಹಲವಾರು ಭರವಸೆ ಮತ್ತು ಆಶ್ವಾಸನೆಗಳನ್ನು ಮತದಾರರಿಗೆ ನೀಡಿದೆ.

ಬಿಪಿಎಲ್ ಕುಟುಂಬದ ಮಹಿಳೆಯರು, ವಿದ್ಯಾರ್ಥಿನಿಯರಿಗೆ ಉಚಿತ ನ್ಯಾಪ್ಕಿನ್, ಉಳಿದ ಮಹಿಳೆಯರಿಗೆ ರೂ 1 ಕ್ಕೆ ಸ್ಯಾನಿಟರಿ ನ್ಯಾಪ್ಕಿನ್ ನೀಡಲಾಗುವುದು, “ವಿವಾಹ ಮಂಗಳ” ಯೋಜನೆ ಅಡಿ ಬಿಪಿಎಲ್ ಕುಟುಂಬದ ಯುವತಿಯರ ಮದುವೆಗೆ ರೂ 25,000 ಮತ್ತು 3 ಗ್ರಾಂ ಚಿನ್ನದ ತಾಳಿ ನೀಡಲಾಗುವುದು. ಇದಲ್ಲದೇ ಸ್ತ್ರೀಶಕ್ತಿ ಮತ್ತು ಸ್ವಸಹಾಯ ಸಂಘಗಳ ಮಹಿಳೆಯರಿಗೆ ಶೇಕಡ 1 ರ ಬಡ್ಡಿದರದಲ್ಲಿ ರೂ 2 ಲಕ್ಷದ ವರೆಗೆ ಸಾಲ ನೀಡಲಾಗುತ್ತೆದ ಎಂಬದು ಪ್ರಣಾಳಿಕೆಯಲ್ಲಿರುವ ಮುಖ್ಯಾಂಶಗಳು.!