ವಿಜಯಪುರ: ನನಗೆ ಬಿಜೆಪಿ ಪಕ್ಷದ ನೀಡಿದ ಶೋಕಾಸ್ ನೋಟಿಸ್ ನೀಡಿದ್ದು, ಅದಕ್ಕೆ ನಾನು ಉತ್ತರಿಸಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ವಿಜಯಪುರದಲ್ಲಿ ಮಾತನಾಡಿ, ನನ್ನ ಅಭಿಪ್ರಾಯ ವ್ಯಕ್ತಪಡಿಸುವುದಕ್ಕಾಗಿ ಅವಕಾಶ ಕೋರಿ ಪಿಎಂ ಮೋದಿ, ಅಮಿತ್ ಶಾ, ಜೆ.ಪಿ.ನಡ್ದಾ ಅವರಿಗೆ ಪತ್ರ ಬರೆದಿದ್ದೇನೆ. ಪ್ರಧಾನಿ ಬಳಿ ರಾಜ್ಯದ ಜನರ ಭಾವನೆ ಬಿಚ್ಚಿಡುತ್ತೇನೆ. ಜನರ ಭಾವನೆ ಹೇಳಿಕೊಳ್ಳಲು ನಾನು ಹೆದರುವುದಿಲ್ಲ. ರಾಜ್ಯದ ಬಗ್ಗೆ ಮನವರಿಕೆ ಮಾಡಿಕೊಡುತ್ತೇನೆ ಎಂದು ಅವರು ಹೇಳಿದ್ದಾರೆ.