ಕಾರವಾರ: ಬಿಜೆಪಿ ನಾಯಿಗಳು ಬೊಗಳುತ್ತಿರಲಿ. ನಾನು ಆನೆಯಂತೆ ಮುಂದೆ ಹೋಗುತ್ತಲೇ ಇರುತ್ತೇನೆ ಎಂದು ಕಾರವಾರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಹೇಳಿದ್ದಾರೆ.

 

ಕಾರವಾರದಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಿಗಳು ನನ್ನ ಆಪ್ತರ ಮನೆ ಮೇಲೆ ದಾಳಿ ನಡೆಸಿ ಕಟ್ಟಿ ಹಾಕುವ ಪ್ರಯತ್ನಕ್ಕಿಳಿದಿವೆ, ಇದಕ್ಕೆಲ್ಲ ನಾನು ಹೆದರುವುದಿಲ್ಲ ಎಂದರು.

 

ಇತ್ತೀಚಿಗೆ ಶಿರಸಿಯಲ್ಲಿ ಆನಂದ್ ಅಸ್ನೋಟಿಕರ್ ಆಪ್ತ ಶಕೀಲ್ ಎನ್ನುವ ಟಿಂಬರ್ ಉದ್ಯಮಿಯೊಬ್ಬರ ಮನೆ ಮೇಲೆ ಐಟಿ ದಾಳಿ ನಡೆದಿತ್ತು.