ಚಿತ್ರದುರ್ಗ: ಜಿಲ್ಲಾ ಅಧ್ಯಕ್ಷ ನವೀನ್ ಟಿಕೆಟ್ ನೀಡುವ ಸಮಯದಲ್ಲಿ ಸಹಕರಿಸಲಿಲ್ಲ ಆಂತ ಆರೋಪಿಸಿದ್ದು, ಇದೇ ವೇಳೆ ಅವರು ನಾನು ಪಕ್ಷ ಸಂಘಟನೆಗೆ ನಾನು 4-5 ಕೋಟಿ ಖರ್ಚು ಮಾಡಿದ್ದೆ.ಪಕ್ಷದ ವಿವಿಧ ಕಾರ್ಯಗಳಿಗೆ ಮೊಳಕಾಲ್ಮೂರಿಂದ ಬಸ್ ಗಳಲ್ಲಿ ಜನರನ್ನ ಕಳುಹಿಸಿದ್ದೆ. ಬಿಜೆಪಿ ಜಿಲ್ಲಾ ಅಧ್ಯಕ್ಷ ನನಗೆ ಮೋಸ ಮಾಡಿದ್ದಾರೆಂದು ತಿಪ್ಪೆ ಸ್ವಾಮಿ ಆರೋಪಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ತಿಪ್ಪೇಸ್ವಾಮಿ ಇದೇ ವೇಳೆ ನಾನು 10 ಲಕ್ಷ ಕೊಡ್ತಿನಿ ಅಂದ್ರೆ ಅಷ್ಟು ಆಗೋದಿಲ್ಲ 25ಲಕ್ಷ ಬೇಕು ಅಂದಿದ್ದರು. ಸರಿ ಅಂತ ನಾನು 25ಲಕ್ಷ ಕೊಟ್ಟಿದ್ದೆ.

ಕಡೇಗಳಿಗೆಯಲ್ಲಿ ಟಿಕೆಟ್ ಸಿಗದೆ ವಂಚಿಸಿದ್ದಾರೆ.ಹಾಗಾಗಿ ಯಾವುದೇ ಕಾರಣಕ್ಕೂ ಮೊಳಕಾಲ್ಮೂರಿನಲ್ಲಿ ಕಮಲ ಅರಳು ಬಿಡುವುದಿಲ್ಲ ಎಂದು ಹೇಳಿದ್ದಾರೆ.