ಚಿತ್ರದುರ್ಗ: ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಚಂದ್ರಪ್ಪ ಪಕ್ಷದ ಟಿಕೇಟ್ ಘೋಷಣೆಯಾದ ಕೂಡಲೆ ಹೊಳಲ್ಕೆರೆಯ ಗಣಪತಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ನಂತರ ಸಿರಿಗೆರೆ ತರಳಬಾಳು ಬೃಹನ್ಮಠಕ್ಕೆ ಭೇಟಿ ನೀಡಿ ಶ್ರೀಗಳಿಂದ ಆಶೀರ್ವಾದ ಪಡೆದರು.
ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ಎಂ.ಚಂದ್ರಪ್ಪ ನನ್ನ ಅಧಿಕಾರವಧಿಯಲ್ಲಿ ಯಾವುದೇ ಆಸೆ ಆಮಿಷವಿಲ್ಲದೆ ಕ್ಷೇತ್ರದ ಅಭಿವೃದ್ದಿಗೆ ಹಗಲಿರುಳು ಶ್ರಮಿಸಿದ್ದೇನೆ. ಆ ಕೃತಜ್ಞತೆಯಿಂದಲೇ ಮತದಾರರು ಎಲ್ಲಾ ಕಡೆ ನನಗೆ ಒಲವು ತೋರುತ್ತಿದ್ದಾರೆ. ಯಾವುದೇ ಜಾತಿ

ತಾರತಮ್ಯವಿಲ್ಲದೆ ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗುತ್ತಿರುವುದನ್ನು ಕಣ್ಣಾರೆ ಕಂಡ ಬಿಜೆಪಿ ವರಿಷ್ಠರು ನನಗೆ ಟಿಕೇಟ್ ನೀಡಿ ಸ್ಪರ್ಧೆಗೆ ಅವಕಾಶ ಮಾಡಿದ್ದಾರೆ. ಅದಕ್ಕಾಗಿ ನೀವುಗಳು ಆಶೀರ್ವದಿಸಿ ನನ್ನನ್ನು ಗೆಲ್ಲಿಸಿ ಕಪಟ ನಾಟಕವಾಡುತ್ತಿರುವ ಕಾಂಗ್ರೆಸ್‌ನ ಹೆಚ್.ಆಂಜನೇಯನಿಗೆ ಸರಿಯಾದ ಬುದ್ದಿ ಕಲಿಸಿ ಎಂದು ಕೋರಿದರು.
ಮಾದಾರ ಚನ್ನಯ್ಯಗುರುಪೀಠ, ಭೋವಿಗುರುಪೀಠ, ಮುರುಘಾಮಠಕ್ಕೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದರು