ಮೈಸೂರು : ಬಿಜೆಪಿಯವರ ತಂತ್ರ ಏನಂತ ನಾಡಿನ ಜನತೆಗೆ ಗೊತ್ತಿದೆ.ಇಷ್ಟು ದಿನ ಕಾಂಗ್ರೆಸ್ ಮೇಲೆ ಐಟಿ ದಾಳಿ ನಡೆಯುತ್ತಿದ್ದವು. ಕೊನೆ ಕ್ಷಣದಲ್ಲಿ ಬಿಜೆಪಿಯವರು ಕೇಳಿ ದಾಳಿ ಮಾಡಿಸಿಕೊಂಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀರಾಮುಲು ವಾಸ್ತವ್ಯ ಹೂಡಿದ್ದ ರೆಸಾರ್ಟ್ ಮೇಲೆ ಐಟಿ ದಾಳಿ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಅವರು, ನಾನು 12 ಚುನಾವಣೆಗಳನ್ನು ನೋಡಿದ್ದೇನೆ. ಯಾವತ್ತೂ ಚುನಾವಣೆ ವೇಳೆ ಐಟಿ ದಾಳಿಗಳು ನಡೆಯುತ್ತಿರಲಿಲ್ಲ. ಐಟಿ ಅಧಿಕಾರಿಗಳು, ಕೇಂದ್ರ ಸರ್ಕಾರದ ನಡೆಯನ್ನು ನಾನು ಎಂದೂ ನೋಡಿರಲಿಲ್ಲ  ಬಿಜೆಪಿ ಯವರ ಐಟಿ ನಾಟಕ ಜನತೆಗೆ ಗೊತ್ತಾಗಿದೆ ಎಂದು ಹೇಳಿದ್ದಾರೆ.