ಚಿತ್ರದುರ್ಗ: ಕಾಂಗ್ರೆಸ್ ನಲ್ಲಿ ಪಲ್ಲಕ್ಕಿ ಹೊರೋರು ಹೆಣ ಹೊರೋರು ನಾವೆ ಎಂಬ ಡಿಕೆಶಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ ಮೊಳಕಾಲ್ಮೂರು ಶಾಸಕ ಶ್ರೀರಾಮುಲು.!

ಬಿಜೆಪಿಯವರು ಇನ್ನು ಮುಂದೆ ಪಲ್ಲಕ್ಕಿ ಹೊರುತ್ತಾರೆ ಹೆಣ ಹೊರುವ ಕೆಲಸವನ್ನ ಡಿಕೆಶಿ ಮತ್ತುಕಾಂಗ್ರೆಸ್ ನವರು ಮಾಡುತ್ತಾರೆ ಎಂದು ಹೇಳಿದರು.

ನನಗೆ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಮನಸಿಲ್ಲ ರಾಜ್ಯ ರಾಜಕಾರಣದಲ್ಲೇ ಮುಂದುವರೆಯುತ್ತೇನೆ ಅದಕ್ಕಾಗಿಯೇ ನಾನು ಮತ್ತು ಬಿಎಸ್ ವೈ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಎಂದರು.

ಬಳ್ಳಾರಿ ಜಿಲ್ಲೆಯಲ್ಲಿ ಬಿಜೆಪಿ ಶಕ್ತಿ ಕಡಿಮೆಯಾಗಿಲ್ಲ ಅಲ್ಲಿ ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪ ಗೆದ್ದೇ ಗೆಲ್ಲುತ್ತಾರೆ ಎಂದು ಹೇಳಿದ್ರು.!