ಮೈಸೂರು: ಬಿಜೆಪಿಯವರಿಗೆ ರೈತರು ಅರ್ಥ ಆಗುವುದಿಲ್ಲ ಅವರಿಗೆ ಗೊತ್ತಿರುವದು ಅದಾನಿ ಅಂಬಾನಿ ಮಾತ್ರ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಏಕೆ ಹೇಳಿದ್ರು ಅಂದ್ರೆ ಮುಖ್ಯ ಮಂತ್ರಿ ಕುಮಾರಸ್ವಾಮಿಯವರು ಭತ್ತನಾಟಿ ಮಾಡುವುದರ ಬಗ್ಗೆ ಬಿಜೆಪಿಯವರು ವ್ಯಂಗ್ಯ ಮಾಡಿರುವುದನ್ನು ತರಾಟೆಗೆ ತೆಗೆದುಕೊಂಡರು.

ಮೈಸೂರಿನಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು. ಈಶ್ವರಪ್ಪನವರು ಸಿಎಂ ಭತ್ತ ನಾಟಿ ಬಗ್ಗೆ ವ್ಯಂಗ್ಯ ಮಾಡಬಾರದು ಮಾಡಿದ್ರೆ  ರೈತ ಸಮೂಹವನ್ನು ವ್ಯಂಗ್ಯ ಮಾಡಿದಂತೆ ಎಂದು ಹೇಳಿದರು.