ಬೆಂಗಳೂರು: ಲೋಕಸಭಾ ಚುನಾವಣೆ ಮುನ್ನ ಮೋದಿ ಕಥೆ ಸೃಷ್ಟಿಸುತ್ತಾರೆ ಎಂದು ಎರಡು ವರ್ಷಗಳ ಹಿಂದೆ ನಿವೃತ್ತ ಸೈನಿಕ ಅಧಿಕಾರಿಯೊಬ್ಬರು ನನ್ನ ಬಳಿ ಚರ್ಚಿಸಿದ್ದರು ಎಂದು ಸಿಎಂ ಕುಮಾರಸ್ವಾಮಿ, ಪರೋಕ್ಷವಾಗಿ ಪುಲ್ವಾಮಾ ದಾಳಿ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ.

ಅಧಿಕಾರಕ್ಕಾಗಿ ಸೈನಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಬಿಜೆಪಿಯವರನ್ನು ನಂಬಬೇಡಿ. ಬಿಜೆಪಿಯವರಿಗೆ ಅಭಿವೃದ್ಧಿ ಬದಲು ಧರ್ಮದ ರಾಜಕಾರಣ ಬೇಕಾಗಿದೆ ಎಂದರು.