ಹೊಸಪೇಟೆ: ಉಪ ಚುನಾವಣೆಯಲ್ಲಿ ವೀರಶೈವ ಲಿಂಗಾಯತರು ಬಿಜೆಪಿಗೆ ಮತ ಹಾಕದಿದ್ದರೆ ಸಿಎಂ ಯಡಿಯೂರಪ್ಪನವರ ಕೆನ್ನೆಗೆ ಬಾರಿಸಿದಂತೆ ಎಂದು ಸಚಿವ ಮಾಧುಸ್ವಾಮಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಹೊಸಪೇಟೆಯ ವೀರಶೈವ ಲಿಂಗಾಯತ ಸಮುದಾಯದ ಸಭೆಯಲ್ಲಿ ಮಾತನಾಡಿ, ನೀವು ಆನಂದ್ ಸಿಂಗ್ ಮೇಲೆ ಕಲ್ಲು ಹೊಡೆದರೆ ಅವರು ತಪ್ಪಿಸಿಕೊಳ್ಳಬಹುದು. ಆದರೆ, ಅದರ ಪೆಟ್ಟು ಬೀಳೋದು ಯಡಿಯೂರಪ್ಪನವರಿಗೆ. ಬಿಎಸ್ ವೈ ನೊಂದು ಬೆಂದು ಸಿಎಂ ಆಗಿದ್ದಾರೆ. ಹೀಗಾಗಿ ಅವರ ಸ್ಥಾನ ಉಳಿಸಲು ಬಿಜೆಪಿಗೆ ಮತ ನೀಡಿ ಎಂದಿದ್ದಾರೆ.