ನವದೆಹಲಿ: ನಾಳೆ ವಿಶ್ವಾಸ ಮತ ಅಸಾಧ್ಯ ಎಂದು ಬಿಜೆಪಿ ಪರ ವಕೀಲ ಮುಕುಲ್ ರೋಹ್ಟಗಿ ವಾದ ಮಂಡಿಸಿದ್ದಾರೆ. ನಾಳೆಯೇ ವಿಶ್ವಾಸ ನಡೆಸಬೇಕು ಎಂದರೆ ಆಗದು. ಈ ನಿಟ್ಟಿನಲ್ಲಿ ತಮ್ಮ ಸೂಚನೆ ಮರು ಪರಿಶೀಲನೆ ನಡೆಸಬೇಕು ಎಂದು ನ್ಯಾಯಾಧೀಶರ ಬಳಿ ಮನವಿ ಮಾಡಿಕೊಂಡಿದ್ದಾರೆ.

ಆದರೆ, ಇದನ್ನು ಒಪ್ಪದ ನ್ಯಾಯಾಧೀಶರು, ನೀವೇನೂ ಬಹುಮತ ಸೃಷ್ಟಿ ಮಾಡ್ತೀರಾ ಏನು ಎಂದು ತರಾಟೆಗೆ ತೆಗೆದುಕೊಂಡಿದ್ದು, ಸಮಯ ನೀಡಲು ಸಾಧ್ಯವೇ ಇಲ್ಲ. ನಾಳೆ ಸಂಜೆ ೪ ಗಂಟೆಗೆ ವಿಶ್ವಾಸ ತೋರಿಸುವಂತೆ ಸೂಚಿಸಿದೆ. ಜತೆಗೆ ಎಲ್ಲ ಶಾಸಕರು ಕಡ್ಡಾಯವಾಗಿ ಹಾಜರು ಇರಬೇಕು. ಈ ನಿಟ್ಟಿನಲ್ಲಿ ಡಿಜಿಪಿಗೆ ಸೂಚಿಸುವುದಾಗಿ ತ್ರಿಸದಸ್ಯ ಪೀಠ ಸೂಚಿಸಿದೆ. ಈ ಮೂಲಕ ಬಿಎಸ್‌ವೈ ಆಡಳಿತ ಪತನವೋ ಅಥವಾ ವಿಶ್ವಾಸ ಮತ ತೋರಿಸಲಿದ್ದಾರೆಯೋ ಎಂಬುದಕ್ಕೆ ಕ್ಷಣಗಣನೆ ಆರಂಭಗೊಂಡಿದೆ.