ಚಿತ್ರದುರ್ಗ: ಸಚಿವ ಸಂಪುಟ ವಿಸ್ತರಣೆ ವಿಷಯ ಬಿಜೆಪಿಗೆ ಕರಾಳ ದಿನ ವಾದ್ರೆ ನಮಗೆ ಸಂತೋಷದ ದಿನ,  ಅವ್ರಿಗೆ ಮರಣದಿನ ವಾದ್ರೆ ನಮಗೆ ಹಬ್ಬದ ದಿನ   ಎಂದು ಸಚಿವ ಆಂಜನೇಯರು ಹೇಳಿದರು.

ಹೊಳಲ್ಕೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಅವರು ಕರಾಳ ದಿನ ವಾದ್ರು ಅಂದುಕೊಳ್ಳಲಿ, ಮರಣ ದಿನವಾದ್ರು ಅಂದುಕೊಳ್ಳಲಿ. ಸಾವಿನಲ್ಲಿ ರಾಜಕೀಯ ಮಾಡುವವರು ನಾವಲ್ಲ ಎಂದರು.

ಆರ್.ಬಿ.ತಿಮ್ಮಾಪುರ್ ವಿಚಾರ ವಿಳಾಸದ ವಿಚಾರ,  ಚುನಾವಣಾ ಆಯೋಗ ಪರಿಶೀಲನೆ  ಮಾಡುತ್ತೆ. ಒಬ್ಬರಿಗೆ ಎರಡು ವಿಳಾಸ ಇರುವುದು ಸಹಜ, ಹೀಗಾಗಿ ಅವರು ಎರಡು ವಿಳಾಸ ನೀಡಿದ್ದಾರೆ, ಅವರು ಭತ್ಯೆ ಪಡೆದಿರೋದು ಸತ್ಯವಾಗಿದ್ರೆಅದು ಹಗರಣವು ಅಲ್ಲ, ಅಪಾದನೆಯು ಅಲ್ಲ ಎಂದರು.

ಒಬ್ಬ ಅಸ್ಪ್ರಶ್ಯ  ಮಂತ್ರಿಯಾಗಿರೋದನ್ನ ಸಹಿಸಲಾಗದವರು ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ,ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ಯಾರಿಗೂ ಅಸಮಾಧಾನ ಇಲ್ಲ, ನಾವೆಲ್ಲಾ ಒಟ್ಟಾಗಿ ಇದ್ದೇವೆ, ಸಿ.ಎಂ. ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ನಾಯಕತ್ವದಲ್ಲಿ ಚುನಾವಣೆ ಹೋಗ್ತೆವೆ ಎಂದರು.

ಯಾರು ಏನೇ ಹೇಳಿದ್ರು ಜನರು ನಮ್ಮ ಪರ ಇದ್ದಾರೆ. ನಾಡಿನ ಅಭಿವೃದ್ಧಿ ದೃಷ್ಟಿಯಿಂದ ನಮ್ಮ ಯೋಜನೆ ಪರಿಣಾಮ ವಾಗಿ ಜನ್ರಿಗೆ ತಲುಪಿಸಲು ನಮ್ಮ ಕಾರ್ಯಕರ್ತರು ಮುಂದಾಗಿದ್ದಾರೆ ಎಂದರು.