ಬೆಂಗಳೂರು: ಪ್ರತಿ  ರೈತರ 2 ಲಕ್ಷರೂಪಾಯಿಗಳ ಸಾಲ ಮನ್ನಾ ಮಾಡಲಾಗುವುದು ಎಂದು ಸಮಿಶ್ರ ಸರಕಾರದ ಚೊಚ್ಚಲ ಬಜೆಟ್ ನಲ್ಲಿ ಮುಖ್ಯ ಮಂತ್ರಿ ಕುಮಾರಸ್ವಾಮಿ ಹೇಳಿದರು.

ಬಹಳ ನಿರೀಕ್ಷಯಿದ್ದ ಪ್ರತಿ ರೈತರ ಸಾಲ ಮನ್ನಾ ಕ್ಕೆ 2 ಲಕ್ಷರೂಗಳು  ಇದಕ್ಕೆ ಕನಿಷ್ಟ 34 ಸಾವಿರ  ಕೋಟಿ ರೂಗಳನ್ನು ಮೀಸಲಿಡಲಾಗವುದು ಎಂದು ಹೇಳಿದ್ದಾರೆ.

ಸರಕಾರ ತಾಯಿ ಹೃದಯವಂದಿರ ಬೇಕು ಎಂದು ಬಜೆಟ್ ಭಾಷಣ ಪ್ರಾರಂಭಮಾಡಿದ ಕುಮಾರಸ್ವಾಮಿಯವರು  ಹಿಂದಿನ ಸರಕಾರದ ಎಲ್ಲಾ ಜನಪರ ಕಾರ್ಯಕ್ರಮಗಳನ್ನು ಮುಂದುವರೆಸಲಾಗುವುದು. ಜೊತೆಗೆ ಸಚಿವರುಗಳ ದುಂದು ವೆಚ್ಚಕ್ಕೂ ಕಡಿವಾಣಕ್ಕೆ ಹಾಕಲಾಗುವುದು ಎಂದು ಹೇಳಿದ್ದಾರೆ.