ಬೆಂಗಳೂರು: ಕೆ.ಪಿಸಿಸಿ ಅಧ್ಯಕ್ಷಗಾದಿಗೆ ಯಾರು ಆಗುತ್ತಾರೆ ಎಂಬುದಕ್ಕೆ ತೆರೆ ಬೀಳುವ ಸಾದ್ಯತೆ ಇದ್ದು, ಮಧ್ಯಾಹ್ನಕ್ಕೆ ಪ್ರಕಟಗೊಳ್ಳುವ ಸಾಧ್ಯತೆ ಇದೆ.

ಕೆಪಿಸಿಸಿ ಅಧ್ಯಕ್ಷರ ಪಟ್ಟಿಯಲ್ಲಿ ಹಲವಾರು ಹೆಸರುಗಳು ಕೇಳಿಬರುತ್ತಿತ್ತು. ಅದರಲ್ಲಿ ಪ್ರಮುಖವಾಗಿ ಉತ್ತರ ಕರ್ನಾಟಕದವರಿಗೆ ಅದರಲ್ಲೂ ಲಿಂಗಾಯಿತ ಸಮುದಾಯಕ್ಕೆ ಸೇರಿದವರಾದ ಎಚ್.ಕೆ.ಪಾಟೀಲರಿಗೆ ನೀಡಲಾಗುತ್ತದೆ ಎಂದು ಚರ್ಚೆ ನಡೆದಿತ್ತು.

ಆದ್ರೆ ಇಂದು ಅಂತಿಮವಾಗಿ ಕೆಪಿಸಿಸಿ ಪಟ್ಟವನ್ನು ದಿನೇಶ್ ಗುಂಡೂರಾವ್ ಅವರಿಗೆ ನೀಡಲಾಗಿದೆ ಹಾಗೂ ಕಾರ್ಯಧ್ಯಕ್ಷರಾಗಿ ಈಶ್ವರ್ ಖಂಡ್ರೆ ಅವರನ್ನು ನೇಮಿಸಲಾಗಿದೆ ಎಂದು  ದೆಹಲಿಯ ಅಶೋಕ್ ಗೆಹ್ಲೋಟ್ ಹೇಳಿದ್ದಾರಂತೆ.

ಒಟ್ಟಿನಲ್ಲಿ ಮುಂದೆ  ನಡೆಯಲಿರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ದಿನೇಶ್ ಗುಂಡೂರಾವ್ ಹಾಗೂ ಈಶ್ವರ್ ಖಂಡ್ರೆ ಅವರು ಚುನಾವಣೆಯ ಸಾರಥ್ಯವನ್ನು ವಹಿಸಲಿದ್ದಾರೆ.