ಬೆಂಗಳೂರು: ದೀರ್ಘಕಾಲದವರೆಗೆ ಬಿಕ್ಕಳಿಕೆ ಬರ್ತಿದ್ದರೆ ನಿದ್ರೆ ಮತ್ತು ಆಹಾರ ಸೇವನೆಗೆ ಸಮಸ್ಯೆಯಾಗುತ್ತದೆ. ಇದರಿಂದಾಗಿ ನಿರ್ಜಲೀಕರಣ ಮತ್ತು ತೂಕ ಇಳಿಯುವ ಸಮಸ್ಯೆ ಕಾಡಬಹುದು. ತಣ್ಣೀರಿನಿಂದ ಗಾರ್ಗಲ್ ಮಾಡುವುದನ್ನು ತಪ್ಪಿಸಿ. ಹೆಚ್ಚು ಮತ್ತು ವೇಗವಾಗಿ ತಿನ್ನುವುದು ಕೈ ಬಿಡಿ.

ಬಿಕ್ಕಳಿಕೆಯಿಂದ ಬಳಲುತ್ತಿರುವವರು ಒಂದು ಗ್ಲಾಸ್ ನೀರನ್ನು ನಿಧಾನವಾಗಿ ಕುಡಿಯಿರಿ. ಒಂದು ಟೀಸ್ಪೂನ್ ಸಕ್ಕರೆಯನ್ನು ಸೇವಿಸಬಹುದು. ನಿಂಬೆ ರಸ ಕುಡಿಯುವುದ್ರಿಂದ ಕೂಡ ಬಿಕ್ಕಳಿಕೆ ಕಡಿಮೆಯಾಗುತ್ತದೆ. ಒಂದು ಹನಿ ವಿನೆಗರ್ ಅನ್ನು ನಾಲಿಗೆಗೆ ಹಾಕಿ. ಇದು ಕೂಡ ಬಿಕ್ಕಳಿಕೆ ಕಡಿಮೆ ಮಾಡುತ್ತದೆ. ಬಹಳ ನಿಧಾನವಾಗಿ ಮತ್ತು ನಿಯಂತ್ರಿತವಾಗಿ ಉಸಿರಾಡಿ. ಇದನ್ನು 3-4 ಬಾರಿ ಪುನರಾವರ್ತಿಸಿ. ಆಗ ಬಿಕ್ಕಳಿ ನಿಲ್ಲುತ್ತದೆ