ಬೆಂಗಳೂರು: ಲಿಂಗಾಯತ ಮತಗಳು ಬೇರೆ ಕಡೆ ಹೋಗಬಾರದು ಎಂಬ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿಕೆಗೆ ಸಂಬಂಧಿಸಿದಂತೆ ವಿರೋಧ ಪಕ್ಷ ನೀಡಿದ ದೂರಿನ ಮೇರೆಗೆ ಸಿಎಂ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ .

ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದ ವೇಳೆ ಲಿಂಗಾಯತ ಮತದಾರರಿಗೆ ಸಿಎಂ ಆಮಿಷವೊಡ್ಡಿದ್ದು, ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ದೂರು ಬಂದಿತ್ತು ಹಾಗಾಗಿ ಅವರ ಮೇಲೆ ಎಫ್ಐಆರ್  ಹಾಕಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರು ಹೇಳಿದ್ದಾರೆ.