ಬೆಂಗಳೂರು: ಪಕ್ಷದಲ್ಲಿ ಒಬ್ರಿಗೆ ಒಂದೇ ಹುದ್ದೆ ಇರಬೇಕು ಅಂತ ಎಲ್ಲಾ ಪಕ್ಷದಲ್ಲೂ ಅಲಿಖಿತ ನಿಯಮ . ಹಾಗಾಗಿ ಬಿಎಸ್​ವೈ ವಿಧಾನಸಭೆ ವಿರೋಧ ಪಕ್ಷದ ನಾಯಕ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಎರಡೂ ಹುದ್ದೆಯಲ್ಲಿ ಮುಂದುವರೆಯುವುದಕ್ಕೆ ಸ್ವಪಕ್ಷದಲ್ಲಿ ಕೆಲವರು ಅಸಮಾಧಾನ ವ್ಯಕ್ತಪಡಿಸಿ ಬಿಎಸ್ವೈಗೆ ಯಾವುದಾದ್ರೂ ಒಂದು ಹುದ್ದೆಯಲ್ಲಿ ಮುಂದುವರೆಯುವಂತೆ ಅಮಿತ್ ಶಾ ಅವರಿಗೆ ಮನವಿ ಸಲ್ಲಿಸಿದ್ದರು.

ಈ ನಡುವೆ ಬಿಎಸ್​ವೈ ಅವರನ್ನು ರಾಜ್ಯಾಧ್ಯಕ್ಷ ಹುದ್ದೆಯಿಂದ ನಿಯುಕ್ತಿಗೊಳಿಸಿ, ಬೇರೆಯವರನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೂರಿಸುವ ಬಗ್ಗೆ ಚರ್ಚೆ ಕೂಡ ನಡೆದಿತ್ತು ಎನ್ನಲಾಗಿದೆ. ಆದ್ರೆ ಬರಲಿರುವ  ಲೋಕಸಭೆ ಚುನಾವಣೆಯಲ್ಲಿ ಕನಿಷ್ಠ 25 ಸ್ಥಾನಗಳನ್ನು ಗೆಲ್ಲಿಸಿಕೊಡಬೇಕು ಎಂದು ಬಿಜೆಪಿ ಹೈಕಮಾಂಡ್​ ಬಿಎಸ್​ವೈಗೆ ಗುರಿ ನೀಡಿದ್ದು ಈ ಹಿನ್ನಲೆಯಲ್ಲಿ 2019ರ ಲೋಕಸಭೆ ಚುನಾವಣೆಯವರೆಗೆ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರೇ ಮುಂದುವರೆಯಲಿದ್ದಾರೆ. ಇದಲ್ವೆ ಡಬಲ್ ಧಮಾಕ .!