ಬಳ್ಳಾರಿ: ಮೊಹರಂ ಆಚರಣೆಯಲ್ಲಿ ಬಾವಿಗೆ ಜಿಗಿದ ಯುವಕ  ವೇಳೆ ಆಯತಪ್ಪಿ ಬಂಡೆಗೆ ತಲೆ ಬಡಿದು ಸಾವನ್ನಪ್ಪಿದ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

ಮೊಹರಂ ಆಚರಣೆಗೆಂದು ಕೊಟ್ಟೂರು ಉಜ್ಜಯಿನಿಗೆ ಬಂದಿದ್ದ ಖಾಸಿಂ ಅಲಿ (29) ಮೃತಪಟ್ಟಿದ್ದಾನೆ. ಬಾವಿಗೆ ಈಜಲು ಹೋದಾಗ ಎತ್ತರದಿಂದ ಬಾವಿಗೆ ಜಿಗಿಯುವ ಸಂದರ್ಭದಲ್ಲಿ ಆಯತಪ್ಪಿದ ಕಾಸಿಂ ತಲೆ ನೇರವಾಗಿ ಬಂಡೆಗೆ ಅಪ್ಪಳಿಸಿದೆ. ಬಳಿಕ ಖಾಸೀಂ ನೀರಿಗೆ ಬಿದ್ದು ಸಾವನ್ನಪ್ಪಿದ್ದಾನೆ. ಅಲ್ಲಿದ್ದವರು ರಕ್ಷಿಸಲು ಯತ್ನಿಸಿದರೂ ಪ್ರಯತ್ನ ಫಲಿಸಿಲ್ಲ. ಈ ಬಗ್ಗೆ ಠಾಣೆಯಲ್ಲಿ ದೂರು ದಾಖಲಾಗಿದೆ.

( ಸಾಂದರ್ಭಿಕ ಚಿತ್ರ)