ದೊಡ್ಡಬಳ್ಳಾಪುರ: ಶಾಲೆಯಲ್ಲಿ ಮಕ್ಕಳು ಗಲಾಟೆ ಮಾಡಿದ್ರೆ ಶಿಕ್ಷಕಿ ಅಥವಾ ಶಿಕ್ಷಕ ಬೆತ್ತ ತಗೊಂಡು, ಕೈಗೆ ಬಾಸುಂಡೆ ಬರುವಂತೆ ಶಿಕ್ಷಿಸುತ್ತಿದ್ರು ಇಲ್ಲವಾದರೆ ಬೆಂಚಿ ಹತ್ತಿ ನಿಲ್ಲುವಂತೆ ಹೇಳುತ್ತಿದ್ರು ಆದ್ರೆ ಇಲ್ಲೊಂದು ಭಯಂಕರ ಶಿಕ್ಷೆ ನೀಡಿದ ಶಿಕ್ಷಕಿ ಸುದ್ದಿ ವರದಿಯಾಗಿದೆ.

ಇದೊಂದು ಕ್ಷುಲ್ಲಕ ಕಾರಣಕ್ಕೆ  ಅಂಗನವಾಡಿಯಲ್ಲಿ ಶಿಕ್ಷಕಿಯಾಗಿರುವ ಮುನಿರತ್ನಮ್ಮ ಬಾಲಕನ ಕತ್ತು ಕೊಯ್ದಿರುವ ಘಟನೆ ತಾಲ್ಲೂಕಿನ ಕಾಸಘಟ್ಟ ಅಂಗನವಾಡಿ ಕೇಂದ್ರದಲ್ಲಿ ನಡೆದಿದೆ.

ಮುನಿರತ್ನಮ್ಮನ ಮೊಮ್ಮಗನ ಜತೆ ಜಗಳವಾಡಿದ್ದ ಎಂಬಕಾರಣಕ್ಕೆ ಕೋಪಗೊಂಡ ಶಿಕ್ಷಕಿ ಪೃಥ್ವಿರಾಜ್‍ಗೆ ಕೈಯಿಂದ ಥಳಿಸಿ ಬ್ಲೇಡಿನಿಂದ ಕುತ್ತಿಗೆ ಕೊಯ್ದಿದ್ದಾರೆ..

ಪೃಥ್ವಿರಾಜ್(7) ಗಂಭೀರವಾಗಿ ಗಾಯಗೊಂಡಿದ್ದು, ಅವನನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದುಬಂದಿದೆ.

 

( ಸಾಂದಾರ್ಭಿಕ ಚಿತ್ರ)