ನವದೆಹಲಿ: ಗಂಟಲು ದ್ರವ ಮಾತ್ರವಲ್ಲದೆ ಬಾಯಿ ಮುಕ್ಕಳಿಸಿದ ನೀರಿನಿಂದಲೂ ಕೊರೋನಾ ಪರೀಕ್ಷೆ ನಡೆಸಬಹುದೆಂದು ಐಸಿಎಂಆರ್ ತಿಳಿಸಿದೆ.

ತನ್ನ ಹೊಸ ಅಧ್ಯಯನ ವರದಿ ಪ್ರಕಟಿಸುವ ಮುನ್ನ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಈ ಪ್ರಯೋಗ ನಡೆಸಲಾಗಿದ್ದು, ಸುಮಾರು 50 ಸೋಂಕಿತರ ಮೇಲೆ ನಡೆದ ಪರೀಕ್ಷೆಯಲ್ಲಿ ಬಾಯಿ ಮುಕ್ಕಳಿಸಿದ ನೀರಿನಲ್ಲಿ ಕೊರೋನಾ ಪ್ರಾಥಮಿಕ ಲಕ್ಷಣಗಳಿರುವುದು ಪತ್ತೆಯಾದ ಬಳಿಕ ಐಸಿಎಂಆರ್ ಈ ನಿರ್ಧಾರಕ್ಕೆ ಬಂದಿದೆ. !