ಹರಿದ್ವಾರ್: ಹೌದು ದೇಶಿ ಉತ್ಪದಾನಗಳಾದ ಆಯುರ್ವೇದ ಬಗ್ಗೆ ತಮ್ಮದೇ ಆದ ಪ್ರಾಡಕ್ಡ್ಗಳನ್ನು ತಯಾರಿಸಿ ಬಹುರಾಷ್ಟ್ರೀಯ ಕಂನಿಗಳಿಗೆ ಶೇಡ್ ಹೊಡೆದ ಪತಾಂಜಲಿ ಉತ್ಪನ್ನಗಳನ್ನು ಮಾರ್ಕೆಟ್ ನಲ್ಲಿ ಯಶಸ್ವಿಗೊಳಿಸದ ಬಾಬಾ ರಾಮ್ದೇವ್ ಅವರು ಹೊಸ ಕ್ಷೇತ್ರಕ್ಕೆ ಕಾಲ್ಡಿಸಿದ್ದಾರೆ.

ಅದುವೇ ಟೆಲಿಕಾಂ ಕ್ಚೇತ್ರಕ್ಕೆ. ಬಾಬಾ ರಾಮ್ದೇವ್ ಸ್ವದೇಶಿ ಸಮೃದ್ಧಿ ಸಿಮ್ ಕಾರ್ಡ್ ಬಿಡುಗಡೆ ಮಾಡಿದ್ದಾರೆ. ಪತಂಜಲಿ ಆಯುರ್ವೇದ ಹಾಗೂ ಬಿಎಸ್‌ಎನ್‌ಎಲ್ ಜಂಟಿಯಾಗಿ ಈ ಸಿಮ್ ಕಾರ್ಡ್ ಬಿಡುಗಡೆ ಮಾಡಿದೆ.

ಸದ್ಯ ಈ ಸಿಮ್ ನೌಕರರಿಗೆ ಮಾತ್ರ ಲಭ್ಯವಿದೆ. 144 ರೂಪಾಯಿ ರಿಚಾರ್ಜ್ ಮಾಡಿದಲ್ಲಿ ಬಳಕೆದಾರರಿಗೆ 2 ಜಿಬಿ ಡೇಟಾ ಹಾಗೂ ಅನಿಯಮಿತ ಕಾಲಿಂಗ್ ಸೇವೆ ಸಿಗಲಿದೆ. ಇದ್ರ ಜೊತೆಗೆ ಪತಂಜಲಿ ದಿನಕ್ಕೆ 100 ಎಸ್‌ಎಂಎಸ್ ಉಚಿತವಾಗಿ ನೀಡಲಿದೆ.

ನೌಕರರಿಗೆ ಮಾತ್ರ ಲಭ್ಯವಿರುವ ಈ ಸಿಮ್ ಸದ್ಯದಲ್ಲಿಯೇ ಉಳಿದ ಗ್ರಾಹಕರಿಗೂ ಹಂಚಿಕೆಯಾಗಲಿದೆ. ಡೇಟಾ, ಎಸ್‌ಎಂಎಸ್ ಜೊತೆ ಪತಂಜಲಿ ಉತ್ಪನ್ನಗಳ ಮೇಲೆ ಶೇಕಡಾ 10ರಷ್ಟು ರಿಯಾಯಿತಿ ಗ್ರಾಹಕರಿಗೆ ಸಿಗಲಿದೆ. ಇಷ್ಟೇ ಅಲ್ಲ ಈ ಸಿಮ್ ಬಳಕೆದಾರರಿಗೆ 2.5 ಲಕ್ಷ ರೂಪಾಯಿಯವರೆಗೆ ವೈದ್ಯಕೀಯ ವಿಮೆ ಹಾಗೂ 5 ಲಕ್ಷ ರೂಪಾಯಿಯವರೆಗೆ ಲೈಫ್ ಇನ್ಶುರೆನ್ಸ್ ಸಿಗಲಿದೆ. ಕೆಲದಿನಗಳು ಕಾಯಬೇಕು ಅಷ್ಟೆ.