ಹೊಸಪೇಟೆ: ಡಿಕೆ ಶಿವಕುಮಾರ್ ಮೈತುಂಬ ಭ್ರಷ್ಟಾಚಾರ ಪ್ರಕರಣಗಳೇ ಮೆತ್ತಿಕೊಂಡಿರುವ್ಯದರಿಂದ ನಾಳೆ ಜೈಲಿಗೆ ಹೋದರೂ ಆಶ್ಚರ್ಯ ಪಡಬೇಕಿಲ್ಲ ಎಂದು ಶಾಸಕ ಬಿ. ಶ್ರೀರಾಮುಲು ಹೇಳಿದರು.

ಶಿವಕುಮಾರ ಅವರು ಬಳ್ಳಾರಿ ಜಿಲ್ಲೆಯ ಭವಿಷ್ಯ ಬದಲಿಸುವ ಮಾತುಗಳನ್ನು ಆಡುತ್ತಿದ್ದಾರೆ. ಆದರೆ, ಅವರ ಭವಿಷ್ಯದ ಬಗ್ಗೆ ಅವರಿಗೆ ಗೊತ್ತಿಲ್ಲ. ರೊಕ್ಕದ ಅಹಂನಿಂದ ಅವರು ಮೆರೆದಾಡುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಅದು ನಡೆಯೊಲ್ಲ ಎಂದರು.

ಈ ಚುನಾವಣೆ ನನ್ನ ಪಾಲಿಗೆ ಅಗ್ನಿ ಪರೀಕ್ಷೆ ಇದ್ದಂತೆ. ಅದನ್ನು ಸವಾಲಾಗಿ ಸ್ವೀಕರಿಸಿದ್ದೇನೆ’ ಎಂದು ಹೇಳಿದರು.