ಚಿತ್ರದುರ್ಗ: ಬಳ್ಳಾರಿಯನ್ನು ಲೂಟಿ ಹೊಡೆದು ಈಗ ಮೊಳಕಾಲ್ಮೂರಿಗೆ ಬಂದಿದ್ದಾರೆ ಎಚ್ಚರಿಕೆ ಅಂತ ಹೇಳಿದ್ದು ಮಾಜಿ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ

ಚಿತ್ರದುರ್ಗದಲ್ಲಿ ಜೆಡಿಎಸ್ ಹಾಗೂ ಬಿಎಸ್ಪಿ ಪಕ್ಷದವರು ಆಯೋಜಿಸಿದ್ದ ಸಮಾವೇಶದಲ್ಲಿ ಭಾಗವಹಿಸಿ ಮಾತನಡುತ್ತಾ, ಶ್ರೀರಾಮುಲು ಹಾಗೂ ರೆಡ್ಡಿಗಳು ಬಳ್ಳಾರಿಯನ್ನು ಲೂಟಿಮಾಡಿ ಈಗ ಕೋಟೆ ನಾಡಿಗೆ ಲಗ್ಗೆ ಇಟ್ಟಿದ್ದಾರೆ ನೀವು ಎಚ್ಚರ ವಹಿಸದಿದ್ದರೆ ಚಿತ್ರದುರ್ಗವನ್ನು ಲೂಟಿ ಹೊಡೆಯುತ್ತಾರೆ ಎಂದು ಹೇಳಿದರು.

ಈ ಬಾರಿ ಚುನಾವಣೆಯಲ್ಲಿ ಉತ್ತಮವಾದ ಅಭ್ಯರ್ಥಿಗಳನ್ನ ನಿಲ್ಲಿಸಿದ್ದೇನೆ, ಅವರನ್ನ ಗೆಲ್ಲಿಸಿಕೊಡಿ ಎಂದು ಹೆಚ್.ಡಿ.ಕೆ ಮನವಿಮಾಡಿದರು.