ಬಳ್ಳಾರಿ: ಬಳ್ಳಾರಿ ಜಿಲ್ಲೆ ವಿಭಜನೆ ಆದರೆ ಜಿಲ್ಲೆಯಲ್ಲಿ ಬಿಜೆಪಿ ಎರಡು ಹೊಳಾಗುತ್ತದೆ ಎಂದು ಬಿಜೆಪಿ ಶಾಸಕ ಜಿ. ಸೋಮಶೇಖರ್ ರೆಡ್ಡಿ ವಿರೋಧ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಾಗಿ ಘೋಷಣೆ ಮಾಡಲು ಹೊರಟ್ಟಿರುವ ಸರ್ಕಾರದ ತೀರ್ಮಾನದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಬಳ್ಳಾರಿ ಜಿಲ್ಲೆಯಲ್ಲಿ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದಿದ್ದಾರೆ.

ಇನ್ನು ವಿಜಯನಗರ ಜಿಲ್ಲೆ ಬೇಡ ಬೇಡ ಅಂತಾ ಎಷ್ಟು ಬಾರಿ ಸಿಎಂ ಹೇಳಬೇಕು. ನಿಯೋಗ ತೆಗೆದುಕೊಂಡು ಹೋಗಿ ಹೇಳಿದ್ದೇವೆ ಇನ್ನಷ್ಟು ಬಾರಿ ಹೇಳಬೇಕು. ಡಿವೈಡ್ ಆಗಲೇ ಬೇಕು ಎಂದು ಡಿಸೈಡ್ ಆದರೆ ನಾವೇನು ಮಾಡಬೇಕು. ಮೊಂಡುತನಕ್ಕೆ ಬಿದ್ರೆ ನಾವೇನು ಮಾಡಬೇಕು. ನಾನಂತು ಇನ್ನೊಂದು ಬಾರಿ ಸಿಎಂಗೆ ಹೇಳಲ್ಲ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.