ಬಳ್ಳಾರಿ: ಕೇಂದ್ರ ಕಾರಗೃಹಕ್ಕೆ ಎಸ್.ಪಿ. ಅರುಣ್ ರಂಗರಾಜನ್ ದಿಢೀರ್ ಭೇಟಿ ಮಾದಕ ವಸ್ತುಗಳು ಪತ್ತೆಆಗಿವೆ.

ಬೆಂಗಳೂರು ಕಾರಗೃಹದಲ್ಲಿ ಡಿ.ರೂಪ ಮೇಡಂ ಕಾರಗೃಹಕ್ಕೆ ಭೇಟಿ ನೀಡಿದಾಗ ಹಲವಾರು ಐಶರಾಮಿ ವಸ್ತುಗಳು ಸಿಕ್ಕಿದವು ಅವುಗಳ ಬಗ್ಗೆ ಗರಂ ಆಗಿ  ಮೇಲಿನ ಅಧಿಕಾರಿಗಳಿಗೆ ಪತ್ರ ಬರೆದಿದ್ದನ್ನು ನೆನಪಿಸಿ ಬಹುದು.

ಬೆಂಗಳೂರಿನ ಕಾರಗೃದ ಘಟನೆ ನಡೆದು ಇನ್ನೂ ಜನರ ಮನಸ್ಸಿನಿಂದ ಮಾಸಿಲ್ಲ. ಆಗಲೆ ಬಳ್ಳಾರಿ ಕಾರಗೃದಲ್ಲಿ ಎಸ್.ಪಿ ಅರುಣ್ ರಂಗರಾಜನ್ ಭೇಟಿ ಕಾರಗೃದಲ್ಲಿ ನಡೆಯುವ ವಿಷಯಗಳನ್ನು ಬಿಚ್ಚಿಟ್ಟಿದ್ದಾರೆ.

ಅರುಣ್ ರಂಗರಾಜನ್ ಕಾರಗೃಹಕ್ಕೆ ಭೇಟಿ ನೀಡಿದಾಗ ಒಂದು ಏರ್ ಕೂಲರ್,  3 ಎಲ್ಇಡಿ, ತಂಬಾಕು ಪೊಟ್ಟಣಗಳು, 14 ಮೊಬೈಲ್ ಫೋನ್, ಇಯರ್ ಫೋನ್, ಪ್ಯಾಕ್ ಗಟ್ಟಲೆ ಸಿಗರೇಟ್ ಪ್ಯಾಕೆಟ್ಗಳು ಬೀಡಿ ಹೀಗೆ ಮಾದಕ ವಸ್ತುಗಳು ಸಿಕ್ಕಿರುವುದರ ಬಗ್ಗೆ ಎಸ್.ಪಿ. ಅರುಣ್ ರಂಗರಾಜನ್ ಆಶ್ಚರ್ಯ ವ್ಯಕ್ತಪಡಿಸಿ ದೂರನ್ನು ದಾಖಲಿಸಲಾಗುವುದು ಎಂದು ಹೇಳಿದ್ದಾರೆ