ಬಳ್ಳಾರಿ: ಜೆ.ಡಿ.ಎಸ್. ಕಾಂಗ್ರೆಸ್ ಮೈತ್ರಿ ಸರ್ಕಾರ ಇನ್ನೂ ಖಾತೆ ಹಂಚಿಕೆಯಾಗುವ ಮುನ್ನವೇ ಸರ್ಕಾರಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆಯಂತೆ.

ರಾಜ್ಯ ರಾಜಕೀಯದಲ್ಲಿ ಹಿಂದೊಮ್ಮೆ ಬಳ್ಳಾರಿ ಆಪರೇಷನ್ ಕಮಲಕ್ಕೆ ಹೆಸರುವಾಸಿಯಾಗಿತ್ತು. ಹಾಗೆ ಈ ಬಾರಿಯೂ ಆಪರೇಷನ್ ಕಮಲಕ್ಕೆ ಮುಂದಾಗುತ್ತಾ ಎಂಬ ಅನುಮಾನ.

ಏಕೆಂದರೆ ಸಂಮಿಶ್ರ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಎರಡು ಪಕ್ಷದಲ್ಲಿ ಆಂತರಿಕ ಭಿನ್ನಾಭಿಪ್ರಾಯ ಗಳು ಭುಗಿಲೆದ್ದಿದೆ.

ಇದನ್ನು ಸಮರ್ಪಕವಾಗಿ ಬಳಸಿಕೊಳ್ಳು ಬಿಜೆಪಿ ಮುಂದಾಗಿದೆ.

ಹೊಸಪೇಟೆ ಕೈ ಶಾಸಕ ಶೀಘ್ರದಲ್ಲೇ ಬಿಜೆಪಿ ತೆಕ್ಕೆಗೆ ಹೊಗಲು ಮುಂದಾಗಿದ್ದಾರೆ. ಕಾರಣ ಸಚಿವ ಸ್ಥಾನ ಸಿಕ್ಕಿಲ್ಲ.  ಈಗಾಗಲೇ  ಆನಂದಸಿಂಗ್ ಸಂಪರ್ಕದಲ್ಲಿ ಜನಾರ್ದನ ರೆಡ್ಡಿ. ಹಾಗೂ ಸೋಮಶೇಖರ್ ರೆಡ್ಡಿ ನಿರಂತರ ಸಂಪರ್ಕದಲ್ಲಿದ್ದಾರಂತೆ ಎಂಬ ಸುದ್ದಿ ಬಳ್ಳಾರಿಯಲ್ಲಿ ಹರಿದಾಡುತ್ತಿದೆ.